Breaking News

ಪಾನ್ ಕಾರ್ಡ್ ಬಗ್ಗೆ ಮಾಹಿತಿ

ಪಾನ್ ಕಾರ್ಡ್ ಎಂದರೇನು ?

ಭಾರತದ ಆದಾಯ ತೆರಿಗೆ ಇಲಾಖೆಯು ನೀಡುವ  10 ಅಂಕೆಗಳ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರುವ ಕಾರ್ಡನ್ನು ಪಾನ್ ಕಾರ್ಡ್ ಎನ್ನುತ್ತಾರೆ. ವಿಳಾಸ ಬದಲಾವಣೆ ಯಾವ ಪರಿಣಾಮವನ್ನು ಉಂಟುಮಾಡದ ಹಣಕಾಸಿನ ವ್ಯವಹಾರದಲ್ಲಿ ಮುಖ್ಯವಾಗಿ ಬಳಸಲ್ಪಡುವ ಶಾಶ್ವತ ಖಾತೆ ಸಂಖ್ಯೆ ಇದಾಗಿದೆ.

Pan-Card-Image

ಭಾರತದಲ್ಲಿ ಪಾನ್ ಕಾರ್ಡ್ ನ  ಅವಶ್ಯಕತೆ :-

ಭಾರತದಲ್ಲಿ  ಪಾನ್ ಕಾರ್ಡನ್ನು ಆದಾಯ ತೆರಿಗೆ ಪಾವತಿ, ಹೊಸ ಬ್ಯಾಂಕ್ ಖಾತೆ ತೆರೆಯಲು, ಹಣ ಠೇವಣಿ ಇಡಲು ಇನ್ನು ಮುಂತಾದ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ಅವುಗಳನ್ನು ಹಂತ ಹಂತವಾಗಿ ತಿಳಿಯೋಣ. 

ಆದಾಯ ತೆರಿಗೆ ಪಾವತಿ :-

ನೆರೆವಾಗಿ ತೆರಿಗೆಗಳನ್ನು ಪಾವತಿ ಮಾಡಲು ಪಾನ್ ಕಾರ್ಡ ನ ಅವಶ್ಯಕತೆಯಿದ್ದು , ಆಸಂದರ್ಭದಲ್ಲಿ ಬಳಕೆಯಾಗುತ್ತದೆ. 
ಇದರಿಂದಾಗಿ ಹೆಚ್ಚಿನ ತೆರಿಗೆ ಪಾವತಿ ಹಾಗೂ ಹೆಚ್ಚಿನ ತೆರಿಗೆ ವಿನಾಯತಿ ಪಡೆಯುವುದನ್ನು ತಪ್ಪಿಸಬಹುದಾಗಿದೆ. 

ಹೊಸ ಬ್ಯಾಂಕ್ ಖಾತೆ ತೆರೆಯಲು :-

ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಹೊಸ ಖಾತೆ ತೆರೆಯಲು ಅವಶ್ಯವಿರುವ ಪ್ರಮುಖ ದಾಖಲೆಗಳಲ್ಲಿ ಇದು ಒಂದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಅತ್ಯವಶ್ಯ ವಾಗಿದ್ದು, ಇನ್ನೂ ಅನೇಕ ಸಂದರ್ಭದಲ್ಲಿ ಬಳಕೆಯಾಗುತ್ತದೆ. 

ಅಸ್ತಿ ಖರೀದಿ ಅಥವಾ ಮಾರಾಟ :-

ಆಸ್ತಿಯನ್ನು ಖರೀದಿಸುವಾಗ ಅಧಿಕ ಪ್ರಮಾಣದ ಹಣ ವ್ಯವಹಾರ ನಡೆಯುವುದುರಿಂದ ಅತಿ ಮುಖ್ಯವಾಗಿ ಪಾನ್ ಕಾರ್ಡ್ ಅವಶ್ಯವಿರುತ್ತದೆ. ಖರೀದಿಯಲ್ಲದೆ ಮಾರಾಟ ಮಾಡುವಾಗಲೂ ಸಹ ಅವಶ್ಯಕತೆ ಇದ್ದೆ ಇದೆ. 

ಆಭರಣ ಖರೀದಿ :-

ದೊಡ್ಡ ಪ್ರಮಾಣದಲ್ಲಿ  ಆಭರಣ ಖರೀದಿ ಮಾಡುವ ಸಂದರ್ಭದಲ್ಲಿ ಪಾನ್ ಸಂಖ್ಯೆಯನ್ನು ಮಾರಾಟಗಾರನಿಗೆ ನೀಡಬೇಕಾಗುತ್ತದೆ. 

ವಾಹನ ಖರೀದಿ :-

ವಾಹನವನ್ನು ಖರೀದಿಸುವ ಹಾಗೂ ಮಾರಾಟಮಾಡುವ ಸಂದರ್ಭಗಳಲ್ಲಿ ಈ ಶಾಶ್ವತ 10 ಅಂಕೆಯ ಪಾನ್ ಸಂಖ್ಯೆಯು ಅವಶ್ಯವಿದೆ. 

ಭದ್ರತಾ ಹೂಡಿಕೆ :-

ವಿವಿದ ಕ್ಷೇತ್ರದಲ್ಲಿ ಹಣಕಾಸಿನ ಹೂಡಿಕೆಯನ್ನು ಮಾಡುವ ಸಮಯದಲ್ಲಿ ಪಾನ್ ನಂಬರ್ ನ ಅವಶ್ಯಕತೆ ಇರುತ್ತದೆ. 50,000 ಕ್ಕಿಂತಲೂ ಹೆಚ್ಚಿನ ಮೊತ್ತದ ಹೂಡಿಕೆಗೆ  ಪಾನ್ ಸಂಖ್ಯೆಯನ್ನು ಕೇಳಲಾಗುತ್ತದೆ. 

Demo-Pan-Card-Image


ಹಣ ವರ್ಗಾವಣೆ ಮಾಡಲು :-

ಒಂದು ಖಾತೆಯಿಂದ ಮತ್ತೊಂದು ವ್ಯಕ್ತಿಯ ಖಾತೆಗೆ 50,000ಕ್ಕೂ ಮೀರಿದ ಹಣ ವರ್ಗಾವಣೆಗೆ ಪಾನ್ ಸಂಖ್ಯೆಯನ್ನು ನಮೂದಿಸಲು ಹೇಳಲಾಗುತ್ತದೆ. 

ನಗದು ಠೇವಣಿ :- 

50,000 ಕ್ಕಿಂತಲೂ ಹೆಚ್ಚಿನ ಮೊತ್ತದ ನಗದು ಠೇವಣಿಯನ್ನು ತೆರೆಯುವಾಗ ಸಹ ಪಾನ್ ಕಾರ್ಡ್ ಬೇಕಾಗುತ್ತದೆ. 


ನಿಗದಿ ಪಡಿಸಿದ ಮೊತ್ತಕ್ಕಿಂತಲೂ ಹೆಚ್ಚಿನ  ಪ್ರಮಾಣದ ಹಣಕಾಸಿನ ವ್ಯವಹಾರದ ಜಾಡು ಹಿಡಿಯಲು ಭಾರತೀಯ ಆದಾಯ ತೆರಿಗೆ ಇಲಾಖೆಯು ಜಾರಿಗೆ ತಂದ ಒಂದು ಖಾಯಂ ಖಾತೆ ಸಂಖ್ಯೆ ಇದಾಗಿದೆ. ಇದರಿಂದ ತೆರಿಗೆಗಳ್ಳರನ್ನು ಸುಲಭವಾಗಿ ಹಿಡಿಯಬಹುದಾಗಿದ್ದು, ಆದಾಯ ತೆರಿಗೆ ಇಲಾಖೆಯು ಇವುಗಳನ್ನು ಸದಾ ಟ್ರ್ಯಾಕ್ ಮಾಡುತ್ತಿರುತ್ತದೆ. 


No comments