ಕೇವಲ 499 ರೂಪಾಯಿಗೆ ಮೊಬೈಲ್ ….
ದೇಶಿಯ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳು ಫೋನ್ ಬಿಡುಗಡೆ ಮಾಡುವುದು ಒಂದು ಟ್ರೆಂಡಾಗಿ ಮಾರ್ಪಟ್ಟಿದೆ. ಜಿಯೋ,ಏರ್ಟೆಲ್ಆಯಿತು ಈಗ ಬಿಎಸೆನ್ನೆಲ್ ಸರದಿ. ಅತೀ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡುವ ಮೂಲಕ ಜಿಯೋಗೆ
ಸೆಡ್ಡು ಹೊಡೆಯಲು ಸರಕಾರಿ ಸ್ವಾಮ್ಯದ ಕಂಪನಿ ತಯಾರಾಗಿದೆ.
ಬಿ ಎಸ್ ಎನ್ ಎಲ್ , ಭಾರತದ ಪಿಚಿರ್ ಫೋನ್ ಉತ್ಪಾದಕ ಸಂಸ್ಥೆ ಡಿಟೇಲ್ ಮೊಬೈಲ್ಸ್ ಜೊತೆಸೇರಿ ಹೊಸ ಪಿಚರ್
ಫೋನೊಂದನ್ನು ದೇಶದ ಜನತೆಗೆ ಕೇವಲ 499 ರೂಪಾಯಿಗೆ ನೀಡಲು ಮುಂದಾಗಿದ್ದಾರೆ. ಇದರಲ್ಲಿ 346 ರ ಡಿಟೇಲ್ ನ
ಫೋನ್ ಮತ್ತು 153 ರ ಬಿಎಸೆನ್ನೆಲ್ ನ ಒಂದು ವರ್ಷದ ವಾಯ್ಸ್ ಡಿಸ್ಕೌಂಟ್ ಸಹ ಸೇರಿದೆ. ಇದರಲ್ಲಿ ಕರೆ ದರಗಳು 15
ಪೈಸೆ ಪ್ರತಿ ಮಿನಿಟಿಗೆ ಬಿಎಸೆನ್ನೆಲ್ ನಿಂದ ಬಿಎಸೆನ್ನೆಲ್ ಗೆ ಮತ್ತು 40 ಪೈಸೆ ಪ್ರತಿ ಮಿನಿಟಿಗೆ ಇತರೆ ನೆಟ್ವರ್ಕ್ ಗೆ ಕಂಪನಿ
ನೀಡುತ್ತದೆ ಎನ್ನಲಾಗಿದೆ.
ಫೋನಿನ ವಿಶೇಷತೆಗಳು :-
- 1.44 ಇಂಚು ಅಳತೆಯ ಮೋನೋಕ್ರೊಮ್ ಪ್ರದರ್ಶನದೊಂದಿಗೆ ಈ ಫೋನ್ ಬಿಡುಗಡೆಯಾಗುತ್ತಿದೆ.
- 650 MAh ಪವರ್ ಫುಲ್ ಬ್ಯಾಟರಿಯನ್ನು ಹೊಂದಿದೆ.
- ಡಿಟೇಲ್ ಫೋನ್ ಟಾರ್ಚ್ ಲೈಟ್ , ಫೋನ್ ಬುಕ್ , ಎಫ್ ಎಮ್ ರೇಡಿಯೋ , ವೈಬ್ರೇಶನ್ ಮೊಡನ್ನು ಹೊಂದಿದೆ.
- ಬಿ ಎಸ್ ಎನ್ ಎಲ್ ನ ವಿಶೇಷ ಡಿಸ್ಕೌಂಟ್ ಆಫರ್ ನ್ನು ಹೊಂದಿದೆ.
- ಒಂದು ಸಿಮ್ ನ್ನು ಅಳವಡಿಸುವ ಅವಕಾಶವನ್ನು ಹೊಂದಿದೆ.
No comments