Breaking News

ಪತ್ರ ಸಿಂಚನದ ಮೂಲಕ ಪೋಷಕಾಂಶಗಳ ಪೂರೈಕೆ


ಇಂದು ಕೃಷಿ ಕೂಡ  ವೈಜ್ಞಾನಿಕತೆಯೆಡೆಗೆ ತಿರುಗಿದೆ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಲ್ಲಿ ಯಶಸ್ವಿಯಾಗಲು ಅನೇಕ ಕ್ರಮಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗುತ್ತಿದೆ. ಅವುಗಳಲ್ಲಿ ಪತ್ರ ಸಿಂಚನದ ಮೂಲಕ ಪೋಷಕಾಂಶಗಳ ಪೂರೈಕೆ ಮಾಡುವುದೂ ಒಂದು ಮಹತ್ವದ ಕ್ರಮವಾಗಿದೆ.

Spraying Image



ಎಲೆಗಳ ಮೇಲೆ ಪೋಷಕಾಂಶಯುಕ್ತ  ನೀರನ್ನು ಸಿಂಪಡಿಸಿ ಅವುಗಳು ಅತಿ ವೇಗವಾಗಿ ಮತ್ತು ವೈಶಸ್ವಿಯಾಗಿ ಗಿಡಗಳಿಗೆ ತಲುಪುವಂತೆ ಮಾಡುವುದನ್ನೇ ಪತ್ರ  ಸಿಂಚನ ಎನ್ನುವುದು.  ಆ ವಿಧಾನವನ್ನು ಹಂತ ಹಂತವಾಗಿ ತಿಳಿಯೋಣ …
ಓದಿರಿ : ಸಾವಯವ ಕ್ರಷಿಯ ಚೈತನ್ಯದ ಸೆಲೆ .... ಈ ಜೀವಾಮೃತ 

  • ಪತ್ರ ಸಿಂಚನ ಮಾಡಲು ಯೂರಿಯಾ ಗೊಬ್ಬರವು ತುಂಬಾ ಅನುಕೂಲಕರವಾಗಿದೆ.
  • ೫೦ ಲೀಟರ ನೀರನ್ನು ಒಂದು ಡ್ರಮ್ಮಿನಲ್ಲಿ ತೆಗೆದುಕೊಂಡು ಅದಕ್ಕೆ 1 ಕೆ.ಜಿ.ಯಷ್ಟು ಯೂರಿಯಾ ಗೊಬ್ಬರವನ್ನು ( ಶೇಕಡಾ 2  ರ ದ್ರಾವಣ ) ಚೆನ್ನಾಗಿ ಮಿಶ್ರಮಾಡಬೇಕು.
  • ಉತ್ತಮವಾಗಿ ಮಿಶ್ರವಾದ ಗೊಬ್ಬರಯುಕ್ತ  ನೀರನ್ನು ಸಿಂಪರಣೆ ಮಾಡುವುದರಿಂದ ಬೆಳೆಗಳಿಗೆ ಪೋಷಕಾಂಶಗಳನ್ನು ಪೂರೈಸಿದಂತಾಗುತ್ತದೆ.
  • ಇದೇರೀತಿಯಾಗಿ ಡಿಎಪಿ ,ಮ್ಯುರೇಟ್ ಆಫ್ ಪೊಟ್ಯಾಷ್  ಸಹ ಸಿಂಪರಣೆ   ಮಾಡಬಹುದಾಗಿದೆ.
  • ಇವುಗಳನ್ನು ಪ್ರತೀ ಲೀಟರ ನೀರಿಗೆ 5 ಗ್ರಾಂ ಗಿಂತ ಹೆಚ್ಚಿಗೆ ಸೇರಿಸುವುದರಿಂದ ಬೆಳೆಗಳು ಹಾನಿಗೀಡಾಗುತ್ತವೆ.



ಈ ಪಾತ್ರ ಸಿಂಚನವು ಒಂದು ಉತ್ತಮ
ವಿಧಾನವಾಗಿದ್ದು, ಕಡಿಮೆ ಖರ್ಚಿನಲ್ಲಿ ಮತ್ತು ವ್ಯರ್ಥವಾಗದಂತೆ ಗಿಡಗಳಿಗೆ
ಪೋಷಕಾಂಶವನ್ನು ಪೂರೈಸಿದಂತಾಗುತ್ತದೆ.  ಇದರಿಂದ ಉತ್ತಮ ಫಲಿತಾಂಶವನ್ನು  ಪಡೆಯಬಹುದಾಗಿದೆ.


No comments