Breaking News

ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೇ ಎಂದು ನೋಡುವುದು ಹೇಗೆ ?

check Aadhar link with bank account or not image

ಈಗ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಬೇಗ ಲಿಂಕ್ ಮಾಡಲು ಆನ್ ಲೈನ್ ಮಾರ್ಗವನ್ನು ಹುಡುಕುವುದು ಸಹಜ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್  ಸಂಖ್ಯೆಯನ್ನು ಅಪಹರಿಸಿ ಮೋಸ  ಮಾಡುತ್ತಿದ್ದಾರೆ. ಆದ್ದರಿಂದ  ಅಧಿಕೃತ ಸೈಟ್ ನಲ್ಲಿ ಮಾತ್ರ ಆಧಾರ್ ನಂಬರ್ ಮತ್ತು ಬ್ಯಾಂಕ ನಂಬರ್ಗಳನ್ನು ನೀಡುವುದು  ಉತ್ತಮ. ಇಂದು ನಾವು ಬ್ಯಾಂಕ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರುವುದನ್ನು ತಿಳಿಯಲು, ಸರಕಾರದ ಅಧಿಕೃತ ಜಾಲತಾಣಕ್ಕೆ  ಇಲ್ಲಿ ಕ್ಲಿಕ್ ಮಾಡಿ... https://resident.uidai.gov.in/bank-mapper

Aadhar & Bank Account linking status checking web page image
Aadhar & Bank Account linking status checking web page

ಈ ರೀತಿಯ ವೆಬ್ ಪೇಜ್ ತೆರೆದುಕೊಂಡ ನಂತರ  ಆಧಾರ ಸಂಖ್ಯೆಯನ್ನು ಕೇಳಿರುವಲ್ಲಿ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆಯನ್ನು ನೀಡಬೇಕು. ನಂತರ Enter Security Code ಎಂದು ಇರುವಲ್ಲಿ ಎದುರಿನ ಬಾಕ್ಸ್ ನಲ್ಲಿ ನೀಡಲಾದ ಕ್ಯಾಪ್ಚ್ಯಾ ಕೋಡನ್ನು ತುಂಬಿ ಸೆಂಡ್ ಓ ಟಿ ಪಿ ಬಟನನ್ನು ಒತ್ತಬೇಕು. ವೆಬ್ ಪೇಜ್ ಲೋಡ್ ಆಗಿ, ನಿಮ್ಮ ಆಧಾರ್ ಕಾರ್ಡ್ ಮಾಡುವಾಗ ನೀಡಿದ ರೆಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲಾಗುತ್ತದೆ.
ನಂತರ ಬಲ ಭಾಗದಲ್ಲಿರುವ Enter OTP ಬಾಕ್ಸ್ ನಲ್ಲಿ  ಬಂದ ಒಟಿಪಿಯನ್ನು ನೀಡಿ ಕೆಳಗಿರುವ ಲಾಗಿನ್ (Login) ಬಟನ್ ಒತ್ತಬೇಕು.
Aadhar link status Page image


ಈಗ ನಿಮ್ಮ ಆಧಾರ ಸಂಖ್ಯೆಯು ಜೋಡಣೆಯಾಗಿರುವ ಬ್ಯಾಂಕ್ ಖಾತೆ ಸಂಖ್ಯೆ, ಲಿಂಕಿಂಗ್ ಸ್ಟೆಟಸ್ಸ್, ಲಿಂಕಿಂಗ್ ಡೇಟ್ ಮತ್ತು ಬ್ಯಾಂಕ್ ಹೆಸರನ್ನು ತೋರಿಸುತ್ತದೆ.
ಆಧಾರ್ ಜೋಡಣೆಗೆ ಅವಧಿ ವಿಸ್ತರಣೆ....

ಯಾವುದೇ ಕಾರಣಕ್ಕೂ ಆಧಾರ್ ಸಂಖ್ಯೆ, ಒಟಿಪಿ ಮತ್ತು ಬ್ಯಾಂಕ್ ಸಂಖ್ಯೆಗಳನ್ನು ಅಧಿಕೃತವಲ್ಲದ  ಜಾಲತಾಣಗಳಲ್ಲಿ ಹಾಗೂ ಇತರರೊಂದಿಗೆ  ಹಂಚಿಕೊಂಡು ಮೋಸಹೋಗಬೇಡಿ. ಅವಶ್ಯಕತೆ ಇರುವಾಗ ಅಧಿಕೃತ ಜಾಲತಾಣಗಳಲ್ಲಿ ಮಾತ್ರ ಹಂಚಿಕೊಳ್ಳಿ

No comments