Breaking News

ಜಿಯೋ ಫ್ರೀ ಫೋನಿನ ವಿಶೇಷತೆಗಳು

image of Jio Phone

ಜಿಯೋ ಫೋನ್  : ಬೆಲೆ ಮತ್ತು ವಿಶೇಷತೆಗಳು 

ಈಗಾಗಲೆ ಬಿಡುಗಡೆಯಾಗಿರುವ ಅತೀ ಕೆಡಿಮೆ ದರದ  4 G Vol TE ಗೆ ಬೆಂಬಲ ನೀಡಬಲ್ಲ ಫೋನ್ ಕೇವಲ ರೂ. 0 [ ರೂ. 1500/- 3ವರ್ಷದ ಭದ್ರತಾ ಠೇವಣಿ ] ಲಭ್ಯವಿದೆ. ಇದು ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ದರದ ಫೋನ್ ಆಗಿದೆ. 

ಜಿಯೋ ಫೋನ್  ದುಬಾರಿ ಬೆಲೆಯ ಫೋನಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವೈಸ್ ಕಮಾಂಡಿಂಗ್ ಸೇವೆಯನ್ನು ನೀಡಲಾಗಿದೆ. ಇದರಲ್ಲಿ ಗೂಗಲ್ ಕ್ರೋಮ್ ಕಾಸ್ಟ ನಂತೆ ಟಿ.ವಿ. ಶೋಗಳನ್ನೂ  ಕೇಬಲ್ನ ಮೂಲಕ ದೊಡ್ಡ ಸ್ಕ್ರೀನ್ಗೆ ವರ್ಗಾಯಿಸುವ ಹಾಗೂ ಎಫ್ ಎಂ ರೇಡಿಯೋ ಕೇಳುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 3.5 mm ನ ಹೆಡ್ ಫೋನ್ ಜಾಕ್ ಹಾಗೂ 2.4 QVGA ನ ಪ್ರದರ್ಶನವನ್ನು ಹೊಂದಿದೆ. Features of Jio Phone image

ನಾಲ್ಕು ನ್ಯಾವಿಗೇಶನ್ ಬಟನ್ ಗಳ ಜೊತೆಗೆ ಅಲ್ಪ ಅಲ್ಪಾ ನ್ಯೂಮೆರಿಕ್  ಕೀ ಪ್ಯಾಡನ್ನು ಹೊಂದಿದ್ದು, ಎಸ್ಡಿ ಕಾರ್ಡ್ ಸ್ಲಾಟ್, ಕೆಮರಾ  ಹಾಗೂ ಟಾರ್ಚ್ ಲೈಟನ್ನು  ಸಹ ಹೊಂದಿದೆ.

ಫೋನಿನ ಸಾಪ್ಟವೇರ್ ವೈಶಿಷ್ಟ್ಯಗಳು :-

ಈ ಫೋನಿನಲ್ಲಿ ಜಿಯೋದ ಅಪ್ಲಿಕೇಶನಗಳಾದ ಜಿಯೋ ವೈಸ್ , ಜಿಯೋ ಟಿವಿ, ಜಿಯೋ ಮ್ಯೂಸಿಕ್ , ಜಿಯೋ ಮೂವಿ , ಮುಂತಾದವುಗಳನ್ನು ಹೊಂದಿದೆ. ಪ್ರಮುಖ  ವೈಶಿಷ್ಟ್ಯವೆಂದರೆ ವೈಸ್ ಅಸಿಸ್ಟಂಟ್ ಸೇವೆಯನ್ನು ಇಲ್ಲಿ  ಒದಗಿಸಲಾಗಿದೆ. ಭಾರತೀಯ ಭಾಷೆಗಳಿಗೆ ಫೋನ್ ಸಪೋರ್ಟ್ ಮಾಡುವ ಸಾಮರ್ಥ್ಯ ಹೊಂದಿದೆ.

ಫೋನಿನ ಹಾರ್ಡವೆರ್   ವೈಶಿಷ್ಟ್ಯಗಳು :-

ಜಿಯೋ ಫೋನ್ ಉತ್ತಮ 2.4 ಇಂಚ  ಅಳತೆಯ  QVGA ಸ್ಕ್ರೀನ್ ಹೊಂದಿದ್ದು, ಪ್ರದರ್ಶನದ ಸ್ಪಷ್ಟತೆಯನ್ನು ಹೊಂದಿದೆ. 512 MB  ರೆಮ್ (RAM )  ಹಾಗೂ  4 GB ವರೆಗೆ ಹೆಚ್ಚಿಸಬಹುದಾದ ಎಸ್.ಡಿ. ಕಾರ್ಡನ ಅವಕಾಶವಿದೆ. 2000 mAh  ಬ್ಯಾಟರಿ ಮತ್ತು VGA ಕ್ಯಾಮರಾವನ್ನು ಹೊಂದಿದೆ. 




ಇತರೆ ವೈಶಿಷ್ಟ್ಯಗಳು :-

  • ನಮ್ಮ ಧ್ವನಿಯ ಮೂಲಕ ಫೋನ್ಗೆ ವಿವಿಧ ಕಾರ್ಯ ನಿರ್ವಹಿಸಲು ಆದೇಶ ನೀಡಬಹುದಾಗಿದೆ. 
  • ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿದಾಗ ನಮ್ಮ ಲೊಕೇಶನ್ ಸಹ ರವಾನಿಸುತ್ತದೆ. 
  • ಇದು ಎಲ್ಲ ಎಫ್ ಎಮ್ ರೇಡಿಯೋ ಚಾನಲ್ ಗಳನ್ನೂ ಕೇಳಬಹುದಾದ ಸ್ಮಾರ್ಟ್ ರೇಡಿಯೋ ಸೌಲಭ್ಯ ಹೊಂದಿದೆ. 
  • ಈ ಫೋನಿನಲ್ಲಿ ಟಿವಿಯನ್ನು ನೋಡಬಹುದಾಗಿದ್ದು, ಕೇಬಲ್ಲಿನ ಮೂಲಕ ದೊಡ್ಡ ಸ್ಕ್ರೀನಿಗೆ ಶೇರ್ ಮಾಡಬಹುದಾದ ಅವಕಾಶ ನೀಡಲಾಗಿದೆ. 
  •  ಫೋನಿನಲ್ಲಿ ವೈ ಪೈ ಆಯ್ಕೆಯನ್ನು ನೀಡಿದ್ದು, ಡೇಟಾ ಮಾತ್ರವಲ್ಲದೆ ವೈ ಪೈ ಮೂಲಕವೂ ಕಾರ್ಯ ನಿರ್ವಹಿಸಬಹುದಾಗಿದೆ. 
ಭಾರತೀಯ ಜಿಯೋ ಕಂಪನಿಯು ಈ 4 G ಫೋನಿನ ಮೂಲಕ ಹೊಸ ಮೈಲುಗಲ್ಲು ನೆಡಲು ಪ್ರಯತ್ನಿಸಿದ್ದು, ಈ ಫೋನನ್ನು ಪಡೆಯಲು ಆನ್ಲೈನಲ್ಲಿ ಆರ್ಡರ್ ಮಾಡಬೇಕಾಗಿದೆ. ಈಗಾಗಲೇ ಉತ್ತಮ ರೆಸ್ಪೋನ್ಸ್ ದೊರೆತಿದ್ದು,  ಹೆಚ್ಚಿನ ಆಯ್ಕೆಗಳನ್ನು ನೀಡಲು ಕಂಪನಿಯು ಪ್ರಯತ್ನದಲ್ಲಿ ತೊಡಗಿದೆ. 
5,000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಕೇವಲ 5,555/-ಕ್ಕೆ  

No comments