Breaking News

ಪ್ರಿಯಾಂಕಾ ಮತ್ತು ನಿಕ್ ಮದುವೆ ಇದೆ ಡಿಸೆಂಬರ್ ನಲ್ಲಿ..!!

priyanka-chopra-nick-jonas-wedding-on-december
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್  (ಚಿತ್ರ ಗೂಗಲ್ ಕ್ರಪೆ )

ಬಾಲಿವುಡ್ ಬೆಡಗಿ ಪ್ರಿಯಾಂಕಾ ಮತ್ತು ಅಮೇರಿಕಾದ ಸಿಂಗರ್ ನಿಕ್ ಜೋನಸ್ ಅವರ ಮದುವೆ ಇದೇ ಬರುವ ಡಿಸೆಂಬರ್ ನಲ್ಲಿ ನಡೆಯುವುದು ಎಂದು ತಿಳಿದು ಬಂದಿದೆ.

ಇತ್ತೀಚಿಗೆ ರಣವೀರ ಮತ್ತು ದೀಪಿಕಾ ಮದುವೆಯಾದ ಬೆನ್ನಲ್ಲೇ ಈ ಸುದ್ದಿ ಬಂದಿದ್ದು, ಡಿಸೆಂಬರ್ 2 ಮತ್ತು 3 ರಂದು ನಿಕ್ ಮತ್ತು ಪ್ರಿಯಾಂಕಾ ಜೋಡಿ ಮದುವೆಯಾಗಲಿದ್ದಾರೆ. ಡಿಸೆಂಬರ್ 2 ರಂದು ಹಿಂದೂ ಶೈಲಿಯಲ್ಲಿ ಜೋದಪುರದ ಉಮೈದ್ ಭವನದಲ್ಲಿ ಮತ್ತು ಡಿಸೆಂಬರ್ 3 ರಂದು ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹವಾಗಲಿದ್ದಾರೆ.
ಇದನ್ನು ಓದಿರಿ : ಪಿಕ್ಸಾಯ್ತು ದಿಗಂತ್ ಮತ್ತು ಐಂದ್ರಿತಾ ರೈ ಅವರ ಮದುವೆ…!!

ಇದಕ್ಕೂ ಮೊದಲು ಜೋದಪುರದಲ್ಲಿ 29 ಮತ್ತು 30 ರಂದು ಸಂಗೀತ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವೆಂದರೆ ಈ ಜೋಡಿಯು ಮೊದಲದಿನ ಹಿಂದೂ ಮತ್ತು ಎರಡನೆಯ ದಿನ ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹವಾಗಲಿರುವುದು.






SPONSORED CONTENT



No comments