ಭಾರತದ ಮೇಲೆ 10 ಸರ್ಜಿಕಲ್ ದಾಳಿ ನಡೆಸುತ್ತೇವೆ. ಪಾಕಿಸ್ತಾನ ಹೀಗೆ ಹೇಳಲು ಕಾರಣವೇನು..?
ಪಾಕಿಸ್ತಾನ ಮೊದಲಿನಿಂದಲೂ ಭಾರತದ ವಿರುದ್ಧ ಬಯೋತ್ಪಾದಕ ದಾಳಿಗೆ ಪ್ರೇರಕ ಶಕ್ತಿಯಾಗಿ ನಡೆದುಕೊಲ್ಲುತ್ತಲೇ ಬರುತ್ತಿದೆ. ಗಡಿಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸುತ್ತಲೇ ಇದೆ. ಈ ಬಯೋತ್ಪಾದನಾ ಕೃತ್ಯಗಳನ್ನು ತಡೆಗಟ್ಟಲು ದಿಟ್ಟ ಕ್ರಮವಾಗಿ ನರೇಂದ್ರ ಮೋದಿಯವರ ಸರಕಾರ ಭರ್ಜರಿ ಸುರ್ಜಿಕಲ್ ಸ್ಟ್ರೈಕ್ ನ್ನು ಮಾಡಿ ಪಾಕಿಸ್ತಾನಿ ಬಯೋತ್ಪಾದಕರನ್ನು ಹೊಡೆದು ಹಾಕಿತ್ತು. ಇದು ಪಾಪಿ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪಾಕಿಸ್ತಾನದ ಬಯೋತ್ಪಾದಕ ಅಡಗುತಾಣಕ್ಕೆ ಹೋಗಿ ಅವರನ್ನು ದಿಟ್ಟತಾಣದಿಂದ ಹೊಡೆದು ಯಾರಿಗೂ ಗೊತ್ತಾಗದಂತೆ ಮತ್ತೆ ಹಿಂತಿರುಗಿದ ಮಹಾನ್ ದಿನವನ್ನು ಇದೇ ಕೆಲ ದಿನಗಳ ಹಿಂದೆ ಸರ್ಜಿಕಲ್ ಸ್ಟ್ರೈಕ್ ದಿನವೆಂದು ಸೈನ್ಯ ಮತ್ತು ಸರಕಾರ ಆಚರಣೆ ಮಾಡಿತ್ತು. ಅಲ್ಲದೇ ಪಾಕಿಸ್ತಾನದ ಪುಂಡಾಟವನ್ನು ಹತ್ತಿಕ್ಕಲು ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನ ಅಗತ್ಯವಿದೆ ಎಂದು ಕೇಳಿ ಬರುತ್ತಿತ್ತು.
ಮತ್ತೊಂದು ಸರ್ಜಿಕಲ್ ನ ಬಯದಲ್ಲಿರುವ ಪಾಕಿಸ್ತಾನ ಈ ರೀತಿಯಾಗಿ ಹೇಳಿಕೆ ನಿಡುವ ಮೂಲಕ ಭಾರತವನ್ನು ಹಿಂದೆ ಸರಿಸಬಹುದೆಂದು ಕೆಲವು ಪ್ರಯತ್ನಗಳನ್ನು ಮಾಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಲಂಡನ್ನಿನಲ್ಲಿ ಶನಿವಾರ ಮಾತನಾಡಿದ ಪಾಕಿಸ್ತಾನದ ಸೇನಾ ವಕ್ತಾರ ಜ.ಆಸಿಫ್ ಗಫೂರ್ ತಮ್ಮ ಸೇನಾ ಮುಖ್ಯಸ್ಥ ಜ.ಕಮಾರ್ ಜಾವೇದ್ ಬಜ್ವಾ ಅವರ ಜೊತೆ ಸೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಭಾರತವೇನಾದರೂ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದೇ ಆದರೆ ನಾವು ಸುಮ್ಮನಿರುವುದಿಲ್ಲ. ಅದೇ ರೀತಿಯ ಹತ್ತು ಸರ್ಜಿಕಲ್ ಸ್ಟ್ರೈಕ್ ನ್ನು ನಡೆಸುವ ಸಾಮಥ್ಯವನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
No comments