ಬಿಡಿಎ ಅಧಿಕಾರಿಯ ಮನೆಯ ಮೇಲೆ ಎಸಿಬಿ ದಾಳಿ ಅಕ್ರಮ ನಗದು ಚಿನ್ನಾಭರಣ ಪತ್ತೆ..!
ಬೆಂಗಳೂರು(05) : ಮಲ್ಲೇಶ್ವರದ ಮಂತ್ರಿ ಗ್ರೀನ್ಸ್ ಅಪಾರ್ಟಮೆಂಟ್ ನಲ್ಲಿರುವ ಬಿದಿಎ ಅಧಿಕಾರಿ ಟಿ.ಆರ್. ಸ್ವಾಮಿ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ)ಅಧಿಕಾರಿಗಳು ಇಂದು ದಾಳಿ ನಡೆಸಿದರು.
ಅಕ್ರಮ ಆಸ್ತಿಗಳಿಕೆಯ ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 5 ಕೋಟಿಗೂ ಅಧಿಕ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಿನ ಜಾವ ಅಧಿಕಾರಿಗಳು ಮನೆಗೆ ಬಂದಾಗ ಎರಡು ಬಾರಿ ಬೆಲ್ ಮಾಡಿ ಕರೆದರೂ ಬಾಗಿಲು ತೆರೆಯಲಿಲ್ಲ. ಮುಕ್ಕಾಲು ಗಂಟೆಗಳಕಾಲ ಕಾದು ನಂತರ ಒಳಪ್ರವೇಶಿಸಿದ ಅಧಿಕಾರಿಗಳಿಗೆ ಆಶ್ಚರ್ಯ ಕಾದಿತ್ತು. ತಪಾಸಣೆ ನಡೆಸಿದ ತಂಡಕ್ಕೆ ಕಂತೆ ಕಂತೆ ನೋಟಿನ ಪ್ಯಾಡ್ ಗಳು ಕಂಡುಬಂದವು. ಇಷ್ಟೇ ಅಲ್ಲದೇ ಅಪಾರ್ಟಮೆಂಟ್ ನಿಂದ ಎರಡು ಬ್ಯಾಗ್ ನಲ್ಲಿ ಹಣವನ್ನು ತುಂಬಿ ಕಿಟಕಿಯಿಂದ ಎಸೆಯಲಾಗಿತ್ತು. ಒಂದು ಬ್ಯಾಗ್ ನೀರಿನ ಪೈಪ್ ಲೈನ್ ಮೇಲೆ ಸಿಕ್ಕಿಕೊಂಡಿರುವುದನ್ನು ನೋಡಿದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತನಿಕೆಯನ್ನು ಮುಂದುವರೆಸಿದ್ದಾರೆ.
No comments