ಉತ್ತಮ ಹೈನುಗಾರಿಕೆಗೆ ರಾಸುಗಳ ಆಯ್ಕೆ ಹೇಗೆ..?
ನಮ್ಮ ದೇಶದ ಆರ್ಥಿಕತೆಯಲ್ಲಿ ಹೈನುಗಾರಿಕೆ ಪ್ರಮುಖ ಸ್ಥಾನ ಹೊಂದಿದೆ. ಈ ಹೈನುಗಾರಿಕೆ ಒಂದು ಲಾಭದಾಯಕ ಮತ್ತು ಕೃಷಿಗೆ ಪೂರಕ ಉದ್ಯೋಗವಾಗಿದೆ. ಹೈನುಗಾರಿಕೆಯಲ್ಲಿ ಉತ್ತಮ ಲಾಭವನ್ನು ಹೊಂದಬೇಕೆಂದರೆ ರಾಸುಗಳ ಆಯ್ಕೆಯು ಪ್ರಮುಖವಾದ ಅಂಶವಾಗಿದೆ. ಹೈನುರಾಸುಗಳನ್ನು ಕೊಳ್ಳುವಾಗ ಇರಬೇಕಾದ ಉತ್ತಮ ಅಂಶಗಳನ್ನು ನಾವು ಕೆಳಗೆ ತಿಳಿದುಕೊಳ್ಳೋಣ.
1. ಹಸು ಅಥವಾ ಎಮ್ಮೆಯು ಸೌಮ್ಯ ಸ್ವಭಾವವನ್ನು ಹೊಂದಿರಬೇಕು.
2. ೧ ರಿಂದ ೩ನೇ ಕಾರುಗಳನ್ನು ಹಾಕಿದ್ದು ಗರಿಷ್ಟ ವಯಸ್ಸು ೬ ವರ್ಷಗಳು ಮೀರಿರಬಾರದು.
3. ಹೈನುರಾಸುಗಳು ಹೊಳಪಾದ ಹಾಗೂ ಮೃದು ಚರ್ಮ ಮತ್ತು ನುಣುಪಾದ ಕೂದಲುಗಳನ್ನು ಹೊಂದಿರಬೇಕು.
4. ಕಣ್ಣುಗಳು ಕಾಂತಿಯುತವಾಗಿದ್ದು ಚುರುಕಾಗಿರಬೇಕು.
5. ಎದೆ ಗುಂಡಿಗೆ ಮತ್ತು ಹೊಟ್ಟೆ ವಿಶಾಲವಾಗಿಬೇಕು ಹಾಗೂ ಹೊಟ್ಟೆಯು ಜೋತುಬಿದ್ದಿರಬಾರದು.
6. ಹೈನುರಾಸುಗಳ ಬೆನ್ನುಹುರಿಯು ನೇರವಾಗಿರಬೇಕು.
7. ನಾಲ್ಕು ಕಾಲುಗಳ ಮೇಲೆ ಸಮಾನ ಬಾರವನ್ನು ಹಾಕಿ ನಿಂತಿರಬೇಕು. ಕಾಲುಗಂಟುಗಳ ಮೇಲೆ ಬಾವು ಅಥವಾ
ಗಾಯಗಳು ಇರಬಾರದು.
8. ಕೆಚ್ಚಲು ದೊಡ್ಡದಾಗಿರಬೇಕು, ಜೋತುಬಿದ್ದಿರಬಾರದು ಮತ್ತು ಮೃದುವಾಗಿರಬೇಕು.
9. ಕೆಚ್ಚಲಿನ ಮುಂಭಾಗದಲ್ಲಿರುವ ರಕ್ತನಾಳಗಳು ಉದ್ದವಾಗಿದ್ದು ದೊಡ್ಡದಾಗಿರಬೇಕು.
10. ನಾಲ್ಕು ಮೊಲೆತೊಟ್ಟುಗಳು ಸಮಾನ ಅಂತರದಲ್ಲಿದ್ದು, ಮೃದುವಾಗಿರಬೇಕು.
11. ಎರಡು ಹಿಂಗಾಲುಗಳ ನಡುವಿನ ಅಂತರ ಹೆಚ್ಚಿನದಾಗಿದ್ದು ದೊಡ್ಡದಾದ ಕೆಚ್ಚಲಿಗೆ ಸರಿಯಾದ ಸ್ಥಳಾವಕಾಶ
ಸಿಗುವಂತಿರಬೇಕು.
12 ಕಾಲಿನ ಗೊರಸು ದೃಢವಾಗಿದ್ದು ನಡುವಿನ ಅಂತರ ಕಿರಿದಾಗಿರಬೇಕು.
13. ಹಾಲು ಕರೆದಾಗ ಸರಾಗವಾಗಿ ಬರುವಂತಿರಬೇಕು. ಕೆಚ್ಚಲಿನಿಂದ ಹಾಲು ಸೋರಿಹೋಗಬಾರದು.
14. ಹಸು ಖರೀದಿಸುವಾಗ ಅದು ಕರು ಹಾಕಿ ಎರಡು ತಿಂಗಳು ಮೀರಿರಬಾರದು.
15. ಹಾಲಿನ ಇಳುವರಿಯನ್ನು ಸತತವಾಗಿ ೩ ಹೊತ್ತು ಹಾಲು ಹಿಂಡಿ ನೋಡಿಕೊಂಡು ನಿರ್ಧರಿಸಬೇಕು.
ಈ ರೀತಿಯಾಗಿ ಆಯ್ಕೆ ಮಾಡಿದ ಹೈನುರಾಸುಗಳನ್ನು ಖರೀದಿಸಿ ಹೈನೋದ್ಯಮವನ್ನು ಕೈಗೊಳ್ಳುವುದರಿಂದ ಅದರಲ್ಲಿ ಯಶಸ್ಸನ್ನು ಪಡೆದು ವೇಗವಾಗಿ ಮುನ್ನುಗ್ಗಬಹುದು.
ಈ ಲೇಖನ ಇಸ್ತವಗಿದ್ದರೆ ನಮ್ಮ ಫೆಸ್ ಬುಕ್ ಪೇಜನ್ನು ಲೈಕ್ ಮಾಡಿ, ಮತ್ತು ಇಂತಹ ಲೇಖನಗಳನ್ನು ಪ್ರಕಟಿಸಲು ಪ್ರೋತ್ಸಾಹ ನೀಡಿ...
No comments