ಮುಸ್ಲಿಂ ದಾವುದಿ ಬೊಹ್ರಾ ಸಮುದಾಯದ ಕೊಡುಗೆಗಳನ್ನು ಹೊಗಳಿದ ಮೋದಿ..!
ಮುಸ್ಲಿಂ ದಾವುದಿ ಬೊಹ್ರಾ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರು |
ಇಂಧೋರ: ಇಂಧೋರಿನ ಸೈಫಿ ಮಸೀದಿಯಲ್ಲಿ ದಾವುದಿ ಬೊಹ್ರಾ ಮುಸಲ್ಮಾನ ಸಮುದಾಯ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿಯವರು ದೇಶದ ಇತಿಹಾಸದಲ್ಲಿ ದಾವುದಿ ಬೊಹ್ರಾ ಸಮುದಾಯದ ಕೊಡುಗೆಗಳನ್ನು ನೆನೆದು ಅವರನ್ನು ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶಿಯಾ ಮುಸಲ್ಮಾನರ ಒಂದು ಬಾಗವಾದ ದಾವುದಿ ಬೊಹ್ರಾ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯೇ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಮಹತ್ವದ ಸ್ಥಾನವನ್ನು ದೊರಕಿಸಿಕೊಟ್ಟಿದೆ. ದಾವುದಿ ಬೊಹ್ರಾ ಸಮುದಾಯವು ದೇಶಕ್ಕೆ ಸಲ್ಲಿಸಿರುವ ಕೊಡುಗೆಗಳು ಅಪಾರವಾಗಿದ್ದು, ಈ ಪರಿಕಲ್ಪನೆಗೆ ಮಾದರಿಯಾಗಿದೆ.
ನಿಮ್ಮ ಪರಿಶ್ರಮ ಹಾಗೂ ಕಾಣಿಕೆಯ ಫಲವಾಗಿ ಇಂದು ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಅಭಿಸುವಂತಾಗಿದೆ. ಗುಜರಾತಿನ ಅಭಿವೃದ್ಧಿಯಲ್ಲಿ ಈ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
No comments