Breaking News

ಬ್ರಹ್ಮಪುತ್ರ ನದಿಯ ಪ್ರವಾಹದ ಮುನ್ನೆಚ್ಚರಿಕೆ ನೀಡಿದ ಚೀನಾ

china-warns-india-over-floods-may-release-excess-water-into-brahmaputra

ಟಿಬೆಟ್ ಮತ್ತು ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆ ಇದೀಗ ಭಾರತದಲ್ಲಿ ಬ್ರಹ್ಮಪುತ್ರ ನದಿಯ  ಪ್ರವಾಹದ ಬೀತಿಯನ್ನು ಸೃಷ್ಟಿಸಿದೆ. ಬ್ರಹ್ಮಪುತ್ರ ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಬಿಡುವ ಸೂಚನೆಯನ್ನು ನೀಡಿದೆ. 

ಬ್ರಹ್ಮಪುತ್ರ ನದಿಯು ಟಿಬೆಟ್ ನಲ್ಲಿ ಹುಟ್ಟಿ , ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಹೆಸರಿನಲ್ಲಿ ಹರಿಯುತ್ತದೆ. ಅಲ್ಲಿಂದ ಮುಂದೆ ಅಸ್ಸಾಮ್ ಗೆಸಾಗಿ ಬ್ರಹ್ಮಪುತ್ರ  ಎಂದು ಕರೆಸಿಕೊಳ್ಳುತ್ತದೆ. ನಂತರ ಬಾಂಗ್ಲಾದೇಶದ  ಮೂಲಕ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ. ಈ ನದಿಯ ಪ್ರವಾಹದ ಮತ್ತ 150 ವರ್ಷಗಳಲ್ಲೇ ಅಧಿಕವಾಗಿದ್ದು, ಪ್ರವಾಹದ ಭೀತಿಯನ್ನು ಅನುಭವಿಸುತ್ತಿದೆ ಎಂದು ಮಾಹಿತಿ ನೀಡಿದೆ. ಈ ಕಾರಣದಿಂದಾಗಿ ನೀರನ್ನು ಯಾವಾಗಲಾದರು ಹರಿಬುಡುವ ಸಾದ್ಯತೆಗಳಿವೆ ಎಂದು ಎಚ್ಚರಿಕೆ ನೀಡಲಾಗಿದೆ. 

ಬ್ರಹ್ಮಪುತ್ರ ನದಿಯ ಪ್ರವಾಹದ ಮಟ್ಟ ಹೆಚ್ಚಾಗಿದೆ ಎಂದು ಚೀನಾ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ್ದು, ಇದರಿಂದಾಗಿ ನದಿಯ ಕೆಳಬಾಗದಲ್ಲಿರುವ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿರುವ ಕಾರಣ ಅವಶ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅರುಣಾಚಲ ಪ್ರದೇಶದ ಸಂಸದ ನಿನೋಂಗ್ ಏರಿಂಗ್ ತಿಳಿಸಿದ್ದಾರೆ. 




 SPONSORED CONTENT


No comments