ಏಷ್ಯನ್ ಗೇಮ್ಸ್ : ರೋಯಿಂಗ್ ನಲ್ಲಿ ಭಾರತಕ್ಕೆ ಚಿನ್ನ..!
![]() |
ದೋಣಿಯಾಟದಲ್ಲಿ (ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್) ಭಾರತೀಯರು ಚಿನ್ನ ಗೆದ್ದ ಕ್ಷಣ |
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗಳಿಸಿದೆ.
ಭಾರತೀಯ ಕ್ರೀಡಾಪಟುಗಳಾದ ದತ್ತು ಬೋಕನಾಲ್, ಸರವಣ ಸಿಂಗ್, ಓಂ ಪ್ರಕಾಶ್ ಹಾಗು ಸಖಮಿತ್ ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಭಾರತ ಇಲ್ಲಿಯವರೆಗೂ ಆರು ಚಿನ್ನ , ನಾಲ್ಕು ಬೆಳ್ಳಿ ಮತ್ತು 12ಕಂಚಿನ ಪಾದಕಗಳೊಂದಿಗೆ 21 ಪದಕವನ್ನು ಗೆದ್ದಿದೆ.
No comments