ಕರುಣಾನಿಧಿ ಆರೋಗ್ಯದಲ್ಲಿ ಏರುಪೇರು
![]() |
ಎಂ ಕರುಣಾನಿಧಿ |
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿ.ಎಂ.ಕೆ. ಮುಖ್ಯಸ್ಥ ಎಂ ಕರುಣಾನಿಧಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಗುರುವಾರ ರಾತ್ರಿ ಅಂದರೆ ನಿನ್ನೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕಾವೇರಿ ಆಸ್ಪತ್ರೆಯ ಪ್ರಮುಖ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಮುತ್ರನಾಳದ ಸೋಂಕಿಗೆ ಒಳಗಾಗಿದ್ದು,ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ತೊಂಬತ್ತಾರು ವರ್ಷದ ಅವರಿಗೆ ವಯೋ ಸಹಜ ರೋಗಗಳು ಕಾಡುತ್ತಿದ್ದು, ಮೂತ್ರದ ಸೋಂಕು ಉಂಟಾಗಿ ಜ್ವರ ಬಂದಿದೆ. ಸದ್ಯ ಅಭಿಧಮನಿ ರೋಗ ನಿರೋಧಕ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕರುಣಾನಿಧಿಯವರ ಅನಾರೋಗ್ಯದ ಸುದ್ದಿಯನ್ನು ತಿಳಿದ ಉಪಮುಖ್ಯಮಂತ್ರಿ ಓ ಪನೀರ್ ಸೆಲ್ವಂ, ಎಐಎಡಿಎಂಕೆ ಮುಕ್ಯಸ್ಥರು ಸೇರಿದಂತೆ ಗಣ್ಯಾತಿ ಗಣ್ಯರು ಗೋಪಾಲಪುರಂ ನಿವಾಸಕ್ಕೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು. ಡಿಎಂಕೆ ಬೆಂಬಲಿಗರು ಹಾಗೂ ಅಪಾರ ಅಭಿಮಾನಿಗಳು ಆತಂಕಗೊಂಡಿದ್ದು, ಅವರ ನಿವಾಸದ ಎದುರು ದಂದು ದಂದು ರೂಪದಲ್ಲಿ ನೆರೆದಿದ್ದಾರೆ.
No comments