ದೇಶದ 50 ಕೋಟಿ ಜನರಿಗೆ ಸಾಮಾಜಿಕ ಭದ್ರತೆ ವಿಸ್ತರಣೆ ಪ್ರಧಾನಿ ನರೇಂದ್ರ ಮೋದಿ..!
ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಅಭಿವೃದ್ಧಿಯ ವಿಚಾರದಲ್ಲಿ ಹೆಸರನ್ನು ಗಳಿಸುತ್ತಾ ಸಾಗಿದೆ. ಅಂತೆಯೇ ಭದ್ರತಾ ಯೋಜನೆಯನ್ನು ದೇಶದ 50 ಕೋಟಿ ಜನರಿಗೆ ಲಭಿಸುವಂತೆ ವಿಸ್ತರಿಸಲಾಗಿದೆ, ಇದು 2014 ರಲ್ಲಿ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಿಳಿಸಿದ್ದಾರೆ.
ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಸರಕಾರದ ಸಾಮಾಜಿಕ ಭದ್ರತೆ ಯೋಜನೆಯು ಜೀವನದ ಅನಿಶ್ಚಿತತೆಗಳ ಜೊತೆ ಹೋರಾಡಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ. 2014ರಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆದವರ ಸಂಖ್ಯೆ ಐದು ಕೋಟಿಯಿತ್ತು, ಆದರೆ ಈಗ ಅದು ಐವತ್ತು ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಜನ ಧನ ಯೋಜನೆಯು ಮೂರು ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡಿತ್ತು,ಅವುಗಳೆಂದರೆ ಬಡವರಿಗೆ ಬ್ಯಾಂಕ್ಗಳ ಬಾಗಿಲುಗಳನ್ನು ತೆರೆಯುವುದು, ಸಣ್ಣ ವ್ಯವಹಾರಸ್ಥರು ಹಾಗೂ ಉದ್ಯೋನ್ಮುಖ ಉದ್ಯಮಿಗಳಿಗೆ ಬಂಡವಾಳ ಒದಗುವಂತೆ ಮಾಡುವುದು ಹಾಗೂ ಬಡ ಜನರಿಗೆ ಸಾಮಾಜಿಕ ಭದ್ರತೆ ಸಿಗುವಂತೆ ಮಾಡುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
ಜನ ಧನ ಯೋಜನೆಯಡಿ ಇಪ್ಪತ್ತೆಂಟು ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ಮೊದಲಬಾರಿಗೆ ತೆರೆಯಲಾಯಿತು, ಈ ಪೈಕಿ ಮಹಿಳೆಯರೇ ಹೆಚ್ಚು ಖಾತೆಗಳನ್ನು ತೆರೆದಿರುವುದು ಖುಷಿಯ ವಿಚಾರವಾಗಿದೆ ಎಂದು ಹೇಳಿದರು. ಮಹಿಳೆಯರು ಆರ್ಥಿಕ ಮುಖ್ಯವಾಹಿನಿಗೆ ಬರುವುದು ಅವಶ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಸರಕಾರವು ಪ್ರಧಾನ ಮಂತ್ರಿ ಜೀವನ್ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದೆ.ನಿಶ್ಚಿತ ಕನಿಷ್ಟ ಪಿಂಚಣಿ ಯೋಜನೆಯಾ ಅಟಲ್ ಪಿಂಚಣಿ ಯೋಜನೆಯಲ್ಲಿ ಒಂದು ಕೋಟಿ ಮಂದಿ ತಮ್ಮ ಖಾತೆಗಳನ್ನು ತೆರೆದಿದ್ದಾರೆ.
ಈ ಮೇಲಿನ ಯೋಜನೆಗಳಂತೆಯೇ ಇಳಿವಯಸ್ಸಿನವರಿಗೆ ಅಂದರೆ ಅರವತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗಾಗಿ ಸರಕಾರ ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆಯನ್ನು ಪರಿಚಯಿಸಿದೆ. ಈವರೆಗೆ ಈ ಯೋಜನೆಯಡಿ ಮೂರು ಲಕ್ಷ ಜನರು ಲಾಭವನ್ನು ಪಡೆದುಕೊಂಡಿದ್ದಾರೆಂದು ವರದಿಗಳು ಹೇಳುತ್ತಿವೆ ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ತಿಳಿಸಿದ್ದಾರೆ.
YOU MAY ALSO LIKE
No comments