ಮಹಿಳಾ ಏಷ್ಯಾ ಕಪ್ ಟಿ-20 ಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ
ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ ಟಿ-20 ಸರಣಿಯಲ್ಲಿ ಭಾರತದ ವನಿತೆಯರು ತಮ್ಮ ವಿಜಯದ ಯಾತ್ರೆಯನ್ನು ಮುಂದುವರೆಸಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು 7 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಪಾಕಿಸ್ತಾನ ನೀಡಿದ 73 ರನ್ ಗಳ ಸಾದಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು 16.1 ಓವರ್ನಲ್ಲಿ 75 ರನ್ ಗಳಿಸಿ ವಿಜಯದ ಮಾಲೆಯನ್ನು ತನ್ನದಾಗಿಸಿಕೊಂಡಿತು. ಆರಂಭದಲ್ಲಿ ಆಘಾತ ಎದುರಿಸಿದರೂ ಮಂದನಾ(38) ಮತ್ತು ಹರ್ಮನ್ ಪ್ರೀತ್ ಕೌರ್(34*) ಅವರ ಆಕರ್ಷಕ ಆಟದಿಂದಾಗಿ ಜಯ ಸಾಧ್ಯವಾಯಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ವನಿತೆಯರು ಭಾರತದ ಸಾಂಘಿಕ ಧಾಳಿಗೆ ತತ್ತರಿಸಿತು. ನಹಿದಾ ಖಾನ್ 18 ಮತ್ತು ಸನಾ ಮೀರ್ ಅಜೇಯ 20 ರನ್ ಬಿಟ್ಟರೆ, ಇನ್ಯಾವುದೇ ಆಟಗಾರ್ತಿಯರು ಎರಡಂಕಿ ದಾಟಲಿಲ್ಲ. ಪರಿಣಾಮವಾಗಿ ಪಾಕಿಸ್ತಾನದ ವನಿತೆಯರು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 72 ರನ್ ಗಳಷ್ಟನ್ನೇ ಗಳಿಸಲು ಸಾಧ್ಯವಾಯಿತು.
YOU MAY ALSO LIKE
No comments