Breaking News

ಶಾಕಿಂಗ್ ನ್ಯೂಸ್ : 3,450 ಏಕಶಿಕ್ಷಕ ಸರ್ಕಾರಿ ಶಾಲೆಗಳು ಬಂದ್..!


ನೂತನವಾಗಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರ, ಏಕಶಿಕ್ಷಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ವಿವಾದಾತ್ಮಕ ಕೆಲಸಕ್ಕೆ ಮುಂದಾಗಿದೆ. ರಾಜ್ಯದಾದ್ಯಂತ ಏಕಶಿಕ್ಷಕರಿರುವ  ಸರಿಸುಮಾರು 3,450 ಸರಕಾರಿ  ಶಾಲೆಗಳನ್ನು ಸಮೀಪದ ಶಾಲೆಗೆ ವಿಲೀನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಏನ್. ಮಹೇಶ್ ಹೇಳಿದ್ದಾರೆ.

ಸೋಮವಾರ ಕೆ. ಆರ್. ವೃತ್ತದಲ್ಲಿ ಇರುವ ಸರ್ವಶಿಕ್ಷಾ ಅಭಿಯಾನ ಸಭಾಂಗಣದಲ್ಲಿ ಸಮಾಲೋಚನೆ ಸಭೆ ನಡೆಸಿ ಮಾತನಾಡಿದ ಸಚಿವರು ರಾಜ್ಯದಲ್ಲಿ 21,225 ಪ್ರಾಥಮಿಕ ಶಾಲೆ, 22,487 ಹಿರಿಯ ಪ್ರಾಥಮಿಕ ಶಾಲೆ ಸೇರಿ ಒಟ್ಟು 43,712 ಸರಕಾರಿ ಶಾಲೆಗಳು ಇವೆ. ಪ್ರಾಥಮಿಕ ವಿಭಾಗದಲ್ಲಿ 3,372 ಹಾಗೂ  ಹಿರಿಯ ಪ್ರಾಥಮಿಕ ವಿಭಾಗದ 78 ಸೇರಿ  3,450 ಏಕೋಪಾಧ್ಯಾಯ ಶಾಲೆಗಳಿವೆ. ಈ ಶಾಲೆಯ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಉದ್ದೇಶದಿಂದ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.



ಏಕೋಪಾಧ್ಯಾಯ ಶಾಲೆಗಳ ಬದಲಾಗಿ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಶಾಲೆಗನ್ನು ಒಗ್ಗೂಡಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಂತಹ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯಲು ಬೇಕಾದ ವಾಹನದ ವ್ಯವಸ್ಥೆಯನ್ನು ಸರಕಾರದ ವತಿಯಿಂದ ಮಾಡುವ ಬಗ್ಗೆಯೂ ಆಲೋಚನೆ ನಡೆಯುತ್ತಿದೆ. ಮಕ್ಕಳಿಗೆ ಏಕೋಪಾಧ್ಯಾಯ ಶಾಲೆಗಳಿಗಿಂತ ಎಲ್ಲ ಸೌಲಭ್ಯಗಳಿರುವ ಶಾಲೆಗಳಲ್ಲಿ ಪರಿಣಾಮಕಾರಿಯಾದ ಶಿಕ್ಷಣ ನೀಡಬಹುದಾಗಿದೆ. ಅಲ್ಲದೆ ಸುಮಾರು 30 ಸಾವಿರ ಮಕ್ಕಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದರು.



ಶಿಕ್ಷಣ ಇಲಾಖೆಯ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ..




YOU MAY ALSO LIKE



No comments