ಮಹಮ್ಮದ್ ನಲಪಾಡ್‌ಗೆ ಕೊನೆಗೂ ಸಿಗಲಿಲ್ಲ ಬೇಲ್...!
ಮಹಮ್ಮದ್ ನಲಪಾಡ್ |
ಕಳೆದ ಫೆಬ್ರವರಿ ೨೧ ರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಅವರ ಮಗ ಮಹಮ್ಮದ್ ನಲಪಾಡ್‌ಗೆ ಪದೇ ಪದೇ ಕಂಟಕ ಎದುರಾಗುತ್ತಲೇ ಇದೆ.
ವಿದ್ವತ್ ಎಂಬ ಅಮಾಯಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ನಲಪಾಡ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಈ ಹಿಂದಿನ ಕಾಂಗ್ರೆಸ್ ಆಡಳಿತವಿದ್ದ ಕಾರಣ ಅಪ್ಪನ ಅಧಿಕಾರ ಬಳಸಿಕೊಂಡು ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದ ನಲಪಾಡ್‌ಗೆ ಕೋರ್ಟ್ ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ ಎಂದು ಮತ್ತೆ ಆದೇಶಿಸಿದೆ.!
ಕಳೆದ ನಾಲ್ಕು ತಿಂಗಳುಗಳಿಂದ ಜೈಲಿನಲ್ಲೇ ಇರುವ ನಲಪಾಡ್ ಜಾಮೀನಿಗಾಗಿ ಪ್ರಯತ್ನಿಸುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಯಾಕೆಂದರೆ ಹಲ್ಲೆಗೊಳಗಾದ ವಿದ್ವತ್ ಕೂಡಾ ಬಹಳ ಧೃಡವಾಗಿ ನಲಪಾಡ್ ವಿರುದ್ಧ ಕೋರ್ಟ್ ನಲ್ಲಿ ಹೋರಾಡುತ್ತಿದ್ದು, ಪ್ರತೀ ಬಾರಿಯೂ ನಲಪಾಡ್ ಗೆ ಕೋರ್ಟ್ ನಲ್ಲಿ ಹಿನ್ನಡೆಯಾಗುತ್ತಲೇ ಇದೆ. ಇಂದು ಮತ್ತೆ ಕೋರ್ಟ್ ಗೆ ಆಗಮಿಸಿದ ನಲಪಾಡ್ ಮತ್ತೆ ಕಂಗಾಲಾಗಿದ್ದಾರೆ..!
YOU MAY ALSO LIKE
No comments