Breaking News

ಆನ್ ಲೈನ್ ನಲ್ಲಿ ಆಧಾರನ್ನು LIC ಪಾಲಿಸಿಯೊಂದಿಗೆ ಲಿಂಕ್ ಮಾಡುವುದು ಹೇಗೆ ?

ಎಲ್ ಐ ಸಿ ಪಾಲಿಸಿಯೊಂದಿಗೆ ಆಧಾರನ್ನು ಜೋಡಿಸುವುದು ಕಡ್ಡಾಯವಾಗಿದ್ದು, ಡಿಸೆಂಬರ್ 31, 2017 ರ ವರೆಗೆ ಇದ್ದ ವಾಯಿದೆಯನ್ನು  ಸರಕಾರ ವಿಸ್ತರಿಸಿ ಮಾರ್ಚ್ 31, 2018 ಕೊನೆಯ ದಿನವೆಂದು ಆದೇಶ ಹೊರಡಿಸಿದೆ. ಈ ಪಾಲಿಸಿಯನ್ನು ಲಿಂಕ್ ಮಾಡಲು ಎರಡು ವಿಧಾನಗಳು ಇವೆ.


ಆಪ್ ಲೈನ್ ವಿಧಾನ :-

ಆಧಾರ್ LIC ಲಿಂಕ್ ಮಾಡಲು ನೀಡಿರುವ ಪಾರ್ಮ್ ನ್ನು ತೆಗೆದುಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ತುಂಬಿ ಬ್ರಾಂಚ್ ಆಫೀಸ್ ಗೆ ಸಲ್ಲಿಸುವುದು. ಜೊತೆಗೆ ಆಧಾರ್ , ಪಾನ್ ನ ಫೋಟೋ ಕಾಪಿಯ ಮೇಲೆ ಸಹಿಮಾಡಿ ಪಾರ್ಮ್ ನೊಂದಿಗೆ ಬ್ರಾಂಚ್ ಆಫೀಸ್ ಗೆ  ಸಲ್ಲಿಸುವುದು. ಆಧಾರ್ LIC ಲಿಂಕ್ ಮಾಡಲು ಬಳಸುವ ಫಾರ್ಮ್ ನ್ನು ಪಡೆಯಲು ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ.  Download       


ಎನ್ ಲೈನ್ ವಿಧಾನ :- 

ಈ  ವಿಧಾನವು ತುಂಬಾ ಸುಲಭವಾಗಿದ್ದು, ಇಂಟರ್ನೆಟ್ ಲಭ್ಯವಿರುವ ಯಾವುದೇ ಕಂಪ್ಯೂಟರ್ ,ಮೊಬೈಲ್ ಗಳಿಂದ ಲಿಂಕ್ ಮಾಡಿಕೊಳ್ಳಬಹುದು. ಇದು ಸುಲಭ ಮತ್ತು ಅತಿ ವೇಗದ ವಿಧಾನವಾಗಿದೆ.


ಅವಶ್ಯವಿರುವ ದಾಖಲಾತಿಗಳು :-

1) ಆಧಾರ್ ಕಾರ್ಡ್ .
2) ಪಾನ್ ಕಾರ್ಡ್.
3) ಆಧಾರ್ ಮಾಡುವಾಗ ನೀಡಿದ ಸಂಖ್ಯೆಯ ಮೊಬೈಲ್ .


ಯಾವುದಾದರು ಒಂದು ಬ್ರೌಸರ್ ರನ್ನು ತೆರೆದು https://www.licindia.in/ ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಕೆಳಗೆ ತೋರಿಸಲಾದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ  Link Aadhar and Pan to LIC Policies on or before 31 March ಎಂದು ಕಾಣುತ್ತಿರುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿರಿ.




ಮೊಬೈಲ್ , ಆಧಾರ್ , ಪಾನ್ ನನ್ನು ಹಿಡಿದು ತಯಾರಿರಲು ಒಂದು ಅಟೆಂಷನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕೆಳಗೆ ಕಾಣುವ ಪ್ರೋಸಿಡ್ ಎಂಬ ಬಟನ್ ಒತ್ತಿರಿ .  ನಂತರ ತಮ್ಮ ಪೂರ್ಣ ಹೆಸರು, ಹುಟ್ಟಿದ ತಾರೀಕು, ತಂದೆ / ಸಂಗಾತಿಯ ಹೆಸರು , ಆಧಾರ್ ಸಂಖ್ಯೆ ,ಲಿಂಗ, ಈ ಮೇಲ್ ವಿಳಾಸ, ಪಾನ್ ಸಂಖ್ಯೆ , ಮೊಬೈಲ್ ನಂಬರ್ ಹಾಗು ಪಾಲಿಸಿಯ ಸಂಖ್ಯೆಯನ್ನು ಕೇಳುವ ಒಂದು ಪೇಜ್ ತೆರೆದುಕೊಳ್ಳುತ್ತದೆ.



ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿ ನಂತರ LICಪಾಲಿಸಿಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಒಪ್ಪಿಗೆಯ ಸಲುವಾಗಿ ನೀಡಲಾದ ಚಿಕ್ಕ ಬಾಕ್ಸ್ ನ್ನು ಟಿಕ್ ಮಾಡಿ. ಕೆಳಗೆ ನೀಡಲಾದ ಚಿತ್ರದಲ್ಲಿರುವ ಅಕ್ಷರಗಳನ್ನು ತುಂಬಿ ಗೆಟ್ ಓ ಟಿ ಪಿ ಎಂಬ ಬಟನ್ ಒತ್ತಿರಿ.   ನಂತರದಲ್ಲಿ ನೀವು ನೀಡಿರುವ ಎಲ್ಲ ಮಾಹಿತಿಯು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿ, ಹಾಗು ಮೊಬೈಲ್ ಗೆ ಬಂದಿರುವ OTP ಸಂಖ್ಯೆಯನ್ನು ನೀಡಿರಿ. ಸಬ್ಮಿಟ್ ಬಟನ್ ನ್ನು ಒತ್ತಿದ ನಂತರ ಒಂದು ಮೆಸೇಜ್ ಇರುವ ಪೇಜ್ ನಿಮ್ಮ ಮುಂದೆ ತೆರೆಯುತ್ತದೆ. ನಿಮ್ಮ ಆಧಾರ್ ಡೀಟೇಲನ್ನು ಪಡೆಯಲಾಗೆದ್ದು LIC ಪಾಲಿಸಿಯೊಂದಿಗೆ ಲಿಂಕ್ ಮಾಡಲಾಗುವುದು ಮತ್ತು ಲಿಂಕ್ ಆದ  ಮಾಹಿತಿಯನ್ನು SMS/E-Mail ಮೂಲಕ ತಿಳಿಸಲಾಗುವುದು ಎಂದು ಬರುತ್ತದೆ.



 ಇನ್ನು ಕೆಲವೇ ದಿನಗಳು ಉಳಿದಿದ್ದು ಸುಲಭವಾಗಿ ಮತ್ತು ಬೇಗ ಆಧಾರ್ ಲಿಂಕ್ ಮಾಡಲು ಇದು ಒಳ್ಳೆಯ ಮಾರ್ಗವಾಗಿದೆ. ಬೇಗ ನಿಮ್ಮ  ಪಾಲಿಸಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಸರಕಾರದ ಆದೇಶವನ್ನು ಪಾಲಿಸಿ. 

No comments