Breaking News

ಕನ್ನಡಿಗರಿಂದ ಸಾಮಾಜಿಕ ಜಾಲತಾಣದ ಕೊಡುಗೆ - (Amazwing) ಅಮೇಝ್ವಿಂಗ್ ಅಪ್ಲಿಕೇಶನ್

ಧಾರವಾಡದ  ಅಪ್ಜಲ್ ಹುಸೇನ್ , ಬುರ್ಹನ್ ಅಹ್ಮದ ದರೋಗಾ ಮತ್ತು ಶಾನವಾಝ್ ಶೇಖ ಎಂಬ ಮೂವರು ಟೆಕ್ಕಿಗಳು ಅಮೇಝ್ವಿಂಗ್ ಎಂಬ  ಆ್ಯಪ್‍ವೊಂದನ್ನು ರೂಪಿಸುವ ಮೂಲಕ ಫೇಸ್ ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗೆ ಪರ್ಯಾಯ ಜಾಲತಾಣವನ್ನು ಒದಗಿಸಿದ್ದಾರೆ. 

 





ಇದು ಫೇಸ್ ಬುಕ್ ಹಾಗು  ವಾಟ್ಸಪ್ಗಳಂತೆ  ಸಾಮಾಜಿಕ ನೆಟ್ವರ್ಕಿಂಗ್ ತಾಣವೇ ಆಗಿದ್ದು, ತಮ್ಮ ಪ್ರತಿಭೆಗಳನ್ನು ರಾಜ್ಯ,ರಾಷ್ಟ್ರ, ಮತ್ತು ಪ್ರಪಂಚದ ವೇದಿಕೆಗಳನ್ನು ಈ ಆ್ಯಪ್‍ ಒದಗಿಸಿಕೊಡುತ್ತದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಇ ಮೂವರು ಒಂದೂವರೆ ವರ್ಷ ಶ್ರಮವಹಿಸಿ, 10 ಲಕ್ಷ ರೂಪಾಯಿ ಕರ್ಚುಮಾಡಿ ಈ ಅಪ್ಲಿಕೇಶನ್ ನ್ನು ತಯಾರಿಸಿದ್ದಾರೆ.

ಆ್ಯಪ್‍ ನಲ್ಲಿ ಜನರು ತಮ್ಮ ಕೌಶಲ್ಯ ಪೂರ್ಣ ಚಿತ್ರ, ವಿಡಿಯೋ, ಆಡಿಯೋ ಮತ್ತು ಚಾಟ್ಗಳನ್ನೂ ಹಾಕಬಹುದಾಗಿದ್ದು, ಇವು ನಗರ ಮಟ್ಟದಲ್ಲಿ ಮೊದಲು ಪ್ರದರ್ಶನಗೊಳ್ಳುತ್ತವೆ. ಉತ್ತಮ ಪ್ರತಿಕ್ರಿಯೆ ಬಂಡ ಪೋಸ್ಟ್ ಗಳು ರಾಜ್ಯ ,ರಾಷ್ಟ್ರ ಹೀಗೆ ಮುಂದುವರಿಯುತ್ತವೆ. 


ತುರ್ತು ಸಂದರ್ಭ ದಲ್ಲಿ ಸಹಾಯ :-

ಅಮೇಝ್ವಿಂಗ್ ಅಪ್ಲಿಕೇಶನ್ ನಲ್ಲಿ  ತುರ್ತು ಸಂದರ್ಭದಲ್ಲಿ ಹಾಯಕ್ಕೆ ಕರೆಯುವ ಅವಕಾಶವನ್ನು ನೀಡಿದ್ದು, ಸಹಾಯದ ಅವಶ್ಯವಿದ್ದಾಗ ಪೋಸ್ಟ್ ಮಾಡಿದರೆ 10 ಕಿ.ಮೀ. ಸುತ್ತಳತೆಯ ದೂರದಲ್ಲಿರುವ ಅಪ್ಲಿಕೇಶನ್ ಬಳಕೆದಾರರಿಗೆ ಮಾಹಿತಿ ರವಾನಿಸುತ್ತದೆ. ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ವ್ಯಕ್ತಿಗೆ ಪ್ರೊಫೈಲ್ ನಲ್ಲಿ ಮೆಡಲ್ ಮತ್ತು ಅಂಕಗಳು ಸಿಗಲಿದ್ದು, ಸಮಾಜದಲ್ಲಿ ಅವರ ಘನತೆ ಕೂಡ ಹೆಚ್ಚಲಿದೆ.


ಈಗಾಗಲೆ ಕಾಲೇಜುಗಳಲ್ಲಿ ಈ ಅಪ್ಲಿಕೇಶನ್ ನ ಹವಾ ಜೋರಾಗಿದ್ದು, ಹಲವಾರು ಡೌನ್ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಯೂ ಲಭಿಸಿದೆ.


 ಅಮೇಝ್ವಿಂಗ್ ಖಾತೆ ತೆರೆಯಿವ ಬಗೆ..

  • ಈ ಅಪ್ಲಿಕೇಶನ್ (Amazwing ) ಪ್ಲೆ ಸ್ಟೋರ್ ನಲ್ಲಿ ಲಭ್ಯವಿದ್ದು, ಅಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
  • ಮೊಬೈಲ್ ನಲ್ಲಿ ಇನ್ಸ್ಟಾಲ್ ಆದ ನಂತರ ಹೆಸರು,ಮೊಬೈಲ್ ನಂ., ಇಮೇಲ್ ವಿಳಾಸ ನೀಡಿ ಖಾತೆಯನ್ನು ಸುಲಭವಾಗಿ ತೆರೆಯಬಹುದು. 
  • ಈ ಅಪ್ಲಿಕೇಶನ್ ನಿಮ್ಮ ಲೊಕೇಷನ್ ನ್ನು ಕೇಳುತ್ತದೆ. ಸೆಟ್ಟಿಂಗೆ ಹೋಗಿ ಲೊಕೇಶನ್ ಆನ್ ಮಾಡಿದರೆ ನಿಮ್ಮ ನಗರವನ್ನು ಆಯ್ಕೆಮಾಡಿಕೊಳ್ಳುತ್ತದೆ. 
  • ನಿಮ್ಮ ಗೆಳೆಯರೊಂದಿಗೆ ಸೇರಿ ವಿಡಿಯೋ, ಆಡಿಯೋ, ಮತ್ತು ಚಿತ್ರಗಳನ್ನು ಹಂಚಿಕೊಳ್ಳಬಹುದು. 
  • ಇಲ್ಲಿ ಇನ್ನು ಅನೇಕ ಉತ್ತಮ ಆಯ್ಕೆಗಳು ಕಂಡು ಬರುತ್ತವೆ. 



No comments