ಏಷ್ಯಾ ಕಪ್ : ಪಾಕ್ ನಿಂದ ಭಾರತಕ್ಕೆ 163 ರನ್ನುಗಳ ಗುರಿ..!
ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿಹೋದ ಪಾಕಿಸ್ತಾನ 43.1 ಓವರ್ ಗಳಲ್ಲಿ 163 ರನ್ನುಗಳನ್ನು ಗಳಿಸಿ ತನ್ನೇಲ್ಲ ವಿಕೆಟ್ ಒಪ್ಪಿಸಿ ಸರ್ವಪತನಕಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ಕಂಟಕ ಎದುರಾಯಿತು. ಮೊದಲಿಗರಾಗಿ ಕಣಕ್ಕಿಳಿದಿದ್ದ ಇಮಾಮ್ ಉಲ್ ಹಕ್ (2) ಮತ್ತು ಫಕಾರ್ ಜಮಾನ್ (0) ಬಂದಂತೆಯೇ ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ ಬಂದ ಬಾಬರ್ ಅಜಾಮ್ ಹಾಗೂ ಶೋಯಬ್ ಮಲ್ಲಿಕ್ ಜೋಡಿ ಮೂರನೇ ವಿಕೆಟ್ ಗೆ 83 ರನ್ ಗಳಿಸಿದರು. ಪಾಕಿಸ್ತಾನದ ನಾಯಕ ಸರ್ಪರಾಜ್ ಅಹಮಾದ್ ಕೇವಲ 6 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದರು. ಮಲ್ಲಿಕ್ (43),ರಹಿಮ್ ಅಶ್ರಪ್ (21), ಮೊಹಮ್ಮದ್ ಅಮೀರ್ (18) ಬಿಟ್ಟರೆ ಮತ್ತಾರು ಎರಡಂಕಿ ದಾಟಲಿಲ್ಲ.
ಭಾರತದ ಪರ ಭುವನೇಶ್ವರ ಕುಮಾರ್ ಹಾಗೂ ಕೇದರ್ ಜಾದವ್ ತಲಾ 3 ವಿಕೆಟ್, ಜೆಸ್ಟ್ರೀತ್ ಬುಮ್ರಾ 2 ಮತ್ತು ಕುಲದೀಪ್ ಯಾದವ್ 1 ವಿಕೆಟ್ ಪಡೆದು ಪಾಕಿಸ್ತಾನ ಅಲ್ಪ ಮಟ್ಟಕ್ಕೆ ಕುಸಿಯಲು ಕಾರಣರಾದರು.
No comments