ಏಷ್ಯನ್ ಗೇಮ್ಸ್ :100 ಮೀ. ಓಟದಲ್ಲಿ ಡುಟೀ ಚಾಂದ್ ಗೆ ಬೆಳ್ಳಿ.
ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 100 ಮೀ. ಓಟದಲ್ಲಿ ಬೆಳ್ಳಿಯ ಪದಕ ಗೆದ್ದ ಡುಟೀ ಚಾಂದ್ |
ಜಕಾರ್ತಾ : ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 100 ಮೀ ಓಟದಲ್ಲಿ ಡುಟೀ ಚಾಂದ್ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡುಟೀ ಚಾಂದ್ 23.20 ಸೆಕೆಂಡ್ಸ್ ಗಳಲ್ಲಿ ನಿಗದಿತ ಗುರಿಯನ್ನು ಮುಟ್ಟುವ ಮೂಲಕ ಎರಡನೇ ಸ್ಥಾನವನ್ನು ಗಳಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಎರಡಕ್ಕಿಂತ ಹೆಚ್ಚು ಪದಕ ಗೆದ್ದಿರುವ ಭಾರತಿಯ ಅಥ್ಲಿಟ್ ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಹೈಪರ್ ಎಂಡ್ರೋಜೆನಿಜಮ್ ಅಂಶ ಜಾಸ್ತಿ ಇದ್ದ ಕಾರಣ ಒಡಿಶಾದ 22 ರ ಅಥ್ಲಿಟ್ ಡುಟೀ ಚಾಂದ್ ಗೆ 2014 ರಲ್ಲಿ ಕಾಮನ್ ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ತಡೆ ಹಿಡಿಯಲಾಗಿತ್ತು. ನಂತರ ಕೋರ್ಟಿನಲ್ಲಿ ಕಾನೂನುಸಮರ ನಡೆಸಿ, ಪರಿಷ್ಕರಣೆಗೊಂಡ ನಿಯಮಗಳಿಗೆ ಅನುಗುಣವಾಗಿ ಕ್ರಿಡಾಕೂಟದಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದರು.
No comments