ಭಾರತ-ಇಗ್ಲೆಂಡ್ ಟಿ-20 ಕದನ : ಬಿರುಸಿನ ಆರಂಭ ಪಡೆದ ಆಂಗ್ಲರ ಪಡೆ.
ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಮೂರು ಟಿ-20 ಪಂದ್ಯಗಳ ಕೊನೆಯ ಹೈವೋಲ್ಟೇಜ್ ಪಂದ್ಯ ಇದಾಗಿದ್ದು, ಟಾಸ್ ಗೆದ್ದಿರುವ ಭಾರತೀಯ ತಂಡ ಮೊದಲು ಪಿಲ್ದಿಂಗನ್ನು ಆಯ್ಕೆಮಾಡಿಕೊಂಡಿದೆ.
ಈ ಮೊದಲು ನಡೆದ ಎರಡು ಪಂದ್ಯಗಳಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ, ಎರಡನೇ ಪಂದ್ಯದಲ್ಲಿ ಮುಖಭಂಗವನ್ನು ಅನುಭವಿಸಿತ್ತು. ಈಗಾಗಲೇ ಸಮಭಲವನ್ನು ಸಾದಿಸಿರುವ ಎರಡೂ ತಂಡಗಳು ಗೆಲುವಿಗಾಗಿ ಕಾದು ಕುಳಿತಿವೆ.
ಮೊದಲು ಬ್ಯಾಟಿಂಗ್ ಗೆ ಇಳಿದಿರುವ ಇಂಗ್ಲೆಂಡ್ ತಂಡ ಭಿರುಸಿನ ಆರಂಭವನ್ನು ಮಾಡಿದೆ. ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಜೇಸನ್ ರಾಯ್ ಬಿರುಸಿನ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಜೇಸನ್ ರಾಯ್ 31 ಬಾಲ್ ಗಳಲ್ಲಿ 67 ರನ್ ಮತ್ತು ಬಟ್ಲರ್ 21 ಬಾಲ್ ಗಳಲ್ಲಿ 34 ರನ್ ಪೇರಿಸಿದರು. ನಂತರ ಬಂದ ಆಟಗಾರರು ಸಾಮಾನ್ಯ ಪ್ರದರ್ಶನ ನೀಡಿ ನಿರ್ಗಮಿಸಿದ್ದಾರೆ. ಇಂಗ್ಲೆಂಡ್ 20 ಓವರ್ ಗಳಲ್ಲಿ ಕೇವಲ 9 ವಿಕೆಟ್ ಗಳ ನಷ್ಟಕ್ಕೆ 198 ರನ್ನ ಗಳಿಸಲು ಶಕ್ಯವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡದ ಟಿ-20 ಪಂದ್ಯದ ಲೈವ್ ಸ್ಕೋರನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
YOU MAY ALSO LIKE
No comments