Breaking News

ಅತಿ ಭಯಾನಕ ನಿಪಾ ವೈರಸ್ ರೋಗದ ಲಕ್ಷಣಗಳೇನು ? ತಡೆಗಟ್ಟುವುದು ಹೇಗೆ ?

 ಬಾವಲಿ ಮತ್ತು ನಿಪಾ ವೈರಸ್
ಬಾವಲಿ ಮತ್ತು ನಿಪಾ ವೈರಸ್ 


ಕೇರಳದಲ್ಲಿ ಇದುವರೆಗೂ 9 ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿದೆ ಈ ಮಹಾ ಮಾರಿ ನಿಪಾಹ್ ವೈರಸ್. ಕೇರಳದಲ್ಲಿ ಅಲ್ಲಿನ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ಹೈ ಅಲರ್ಟ್ ನ್ನು ಘೋಷಿಸಿದೆ. ಅತ್ಯಂತ ವೇಗವಾಗಿ ಹರಡುವ ಕಾಯಿಲೆ ಇದಾಗಿದೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವ  ಏನ್.ಸಿ.ಡಿ.ಸಿ. ತಂಡವನ್ನು ಕರೆಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.



ರೋಗ ಮೊದಲು ಪತ್ತೆಯಾಗಿದ್ದು :-
ಈ ರೋಗಕ್ಕೆ ಜುನೋಸಿಸ್ ಎಂಬ ವೈರಸ್ ಕಾರಣವಾಗಿದ್ದು, ಅದು ಪ್ರಾಣಿಗಳು ಮತ್ತು ಮನುಷ್ಯರಲ್ಲಿ ರೋಗವನ್ನು ಉಂಟುಮಾಡುತ್ತದೆ. ನಿಪಾ ವೈರಸ್ ಮೊದಲು ಮಲೇಷಿಯಾದಲ್ಲಿ 1998 ರಲ್ಲಿ ಕಾಣಿಸಿಕೊಂಡಿತ್ತು. ಮೊದಲಿಗೆ ಈ ರೋಗ ಹಂದಿಗಳ ಮೂಲಕ ಹರಡುತ್ತದೆ ಎಂದು ನಂಬಲಾಗಿತ್ತು. 2001 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ಇದುವರೆಗೂ ಅನೇಕ ಸಂಶೋದನೆಗಳು ನಡೆಯುತ್ತಿವೆಯಾದರೂ ಯಾವುದೇ ನಿಖರವಾದ ಚಿಕಿತ್ಸೆಗಳು ಲಭ್ಯವಿಲ್ಲ. 


ನಿಪಾ ವೈರಸ್ ಹರಡುವಿಕೆ
ರೋಗ ಹರಡುವಿಕೆ 


ರೋಗ ಹರಡುವ ಮಾಧ್ಯಮ :-
ಈ ಜ್ವರವು ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ,ಹೆಚ್ 1 ಎನ್ 1 ವೈರಸ್ ಹರಡುವಂತೆಯೇ ಇತರ ಜೀವಿಗಳಿಂದ ವೈರಸ್ ನಮ್ಮ ದೇಹ ಸೇರಿ ಉಂಟಾಗುತ್ತದೆ. ಈ ವೈರಸ್ ಬಾವಲಿಗಳ ಮೂಲಕ ಹರಡುತ್ತಿದ್ದು, ಅವುಗಳು ಕಚ್ಚಿಬಿಟ್ಟ ಹಣ್ಣುಗಳ ಸೇವನೆ, ಬಾವಲಿಗಳ ವಾಸವಿರುವ ಬಾವಿಯ ನೀರಿನ ಸೇವನೆ, ಬಾವಲಿಗಳ ಮಲ ಮೂತ್ರಗಳಿಂದ ಕಲುಷಿತವಾದ ಆಹಾರಗಳ ಸೇವನೆ, ಮತ್ತು ಬಾವಲಿಗಳು ಕಚ್ಚಿದ ಆಹಾರವನ್ನು ಹಂದಿಗಳು ಸೇವಿಸಿ, ಹಂದಿಗಳನ್ನು ಆಹಾರವಾಗಿ ಬಳಸಿದಲ್ಲಿ ಹರಡುತ್ತದೆ. ಅಷ್ಟೇ ಅಲ್ಲದೇ ರೋಗಿಗಳ ಸಂಪರ್ಕದಿಂದಲೂ, ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶದಿಂದಲೂ ಹರಡಬಹುದು ಎನ್ನಲಾಗಿದೆ. 




ರೋಗದ ಲಕ್ಷಣಗಳು :- 
ನಿಪಾಹ್ ಸೋಂಕು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 7 ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯವಾದ  ಜ್ವರ, ವಿಪರೀತ ತಲೆನೋವು,ಮಿದುಳಿನ ಉರಿಯೂತ, ಮಾಂಸಖಂಡಗಳ ನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ಉಸಿರಾಟದ ತೊಂದರೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.


ಬಾವಲಿ
ಬಾವಲಿ 

ತಡೆಗಟ್ಟುವ ವಿಧಾನ :-
ಬಾವಲಿಗಳ ಮೂಲಕ  ಹರಡುವುದರಿಂದ  ಯಾವುದೇ ಪ್ರಾಣಿಗಳು ಕಚ್ಚಿದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಡಿ. ಬಾವಲಿಗಳು ವಾಸವಿರುವ ಪ್ರದೇಶಗಳಿಂದ ದೂರವಿರುವುದು ಉತ್ತಮವಾಗಿದೆ. ಬಾವಲಿ, ಹಂದಿಗಳಿಂದ ಕಲುಷಿತವಾದ ನೀರನ್ನು ಸೇವಿಸುವುದರಿಂದ ದೂರವಿರಬೇಕು. ಹಂದಿಯ ಮಾಂಸದ ಸೇವನೆಯನ್ನು ಕೆಲದಿನಗಳು ತ್ಯಜಿಸುವುದು ಉತ್ತಮ. ನೆಗಡಿ, ಕೆಮ್ಮು, ಜ್ವರ ಬಂದ ತಕ್ಷಣ ವೈದ್ಯರನ್ನು ಭೆಟ್ಟಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರ ಮತ್ತು ಕಷಾಯಗಳನ್ನು ಸೇವಿಸುವುದು ಉತ್ತಮ. 





YOU MAY ALSO LIKE



No comments