Breaking News

ಥಿಯೇಟರ್ ಗೆ 'ರ‍್ಯಾಂಬೋ-2' ಎಂಟ್ರಿ

ರ‍್ಯಾಂಬೋ-2
ರ‍್ಯಾಂಬೋ-2

ಹಾಡುಗಳಿಂದಲೇ ಪ್ರಸಿದ್ದಿಯನ್ನು ಗಳಿಸಿರುವ ಶರಣ್ ಅಭಿನಯದ ಚಿತ್ರ ರ‍್ಯಾಂಬೋ-2.  ಚಿತ್ರದಲ್ಲಿ ಮೊದಲ ಬಾರಿಗೆ ಶರಣ್‌ಗೆ ಜೋಡಿಯಾಗಿ ನಟಿ ಆಶಿಕಾ ರಂಗನಾಥ್‌ ನಟಿಸಿದ್ದಾರೆ. ಅನೇಕ ಸರ್ಪ್ರೈಸ್ ಗಳ ಮೂಟೆಯನ್ನು ಹೊತ್ತು ಜನತೆಯ ಮುಂದೆ ರ‍್ಯಾಂಬೋ-2 ಬರುತ್ತಿದೆ. 

'ರ‍್ಯಾಂಬೋ-2’ ಚಿತ್ರವು ಫನ್‌ ಎಂಟರ್‌ಟೈನಿಂಗ್‌ ಜತೆಗೆ ಉತ್ತಮ ಸಂದೇಶ ನೀಡುವಂಥ ಸಿನಿಮಾ. ಶರಣ್‌ ಮತ್ತು ಚಿಕ್ಕಣ್ಣ ಅವರ ಕಾಂಬಿನೇಶನ್‌ ಅಂದರೆ ಜನ ಕಾಮಿಡಿಯನ್ನೇ ನಿರೀಕ್ಷೆ ಮಾಡುತ್ತಾರೆ. ಅಲ್ಲದೇ ಹಿಟ್‌ ಜೋಡಿ ಕೂಡ ಇದು. ಈವರೆಗೂ ಕಾಣದೇ ಇರುವಂಥ ರೀತಿಯಲ್ಲಿ ಶರಣ್‌ ಮತ್ತು ಚಿಕ್ಕಣ್ಣ ಅವರನ್ನು ತೋರಿಸಲಾಗಿದೆ ಎಂದು ನಿರ್ದೇಶಕ ಅನಿಲ್‌ ಹೇಳಿಕೊಂಡಿದ್ದಾರೆ.  


ಅರ್ಜುನ್‌ ಜನ್ಯ ಅವರ ಸಾರಥ್ಯದಲ್ಲಿ ಮೂಡಿಬಂದ 'ಚುಟು ಚುಟು, ಧಮ್‌ ಮಾರೋ ದಮ್‌, ಯವ್ವಾ ಯವ್ವಾ, ಬಿಟ್ಹೋಗ್ಬೇಡ ಹಾಡುಗಳು ಸೂಪರ್‌ ಹಿಟ್‌ ಆಗಿದ್ದು, ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಪ್ರಸಿದ್ದಿಯನ್ನು ಪಡೆದಿವೆ. 








No comments