ಅಂಬರೀಷ್ ಪುತ್ರನ ಸ್ಯಾಂಡಲ್ ವುಡ್ ಎಂಟ್ರಿ
ಅಮರ್ |
ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ನಟನೆಯ ಮೊದಲ ಚಿತ್ರ ಅಮರ್ ಫಸ್ಟ್ ಲುಕ್ ನಿಂದ ಎಲ್ಲರ ಗಮನ ಸೆಳೆಯುತ್ತಿದ್ದು, ಅಂಬರೀಷ್ ಪುತ್ರ ಅಭಿಷೇಕ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಅಭಿಷೇಕ್ ಅವರಿಗೆ ಈ ಚಿತ್ರದಲ್ಲಿ ತನ್ಯಾ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಅಭಿಷೇಕ್ ನಟಿಸುತ್ತಿರುವ ಅಮರ್ ಚಿತ್ರದ ಮಹೂರ್ತ ಇಂದು ನಡೆಯಿತು. ಈಗ ಅಭಿಗೆ ಸ್ಯಾಂಡಲ್ ವುಡ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ತಾರಾಮಣಿಗಳು ಅಂಬಿ ಪುತ್ರನ ಹೊಸ ಸಿನಿಮಾಗೆ ಶುಭ ಹಾರೈಸಿದ್ದಾರೆ.ಅಮರ್ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಈ ಚಿತ್ರದಲ್ಲಿ ಒಬ್ಬ ಬೈಕ್ ರೇಸರ್ ಪಾತ್ರ ಮಾಡುತ್ತಿದ್ದು, ಚಿತ್ರದಲ್ಲಿ ಹೀರೋ ಹೀರೋಯಿನ್ ಇಬ್ಬರು ಸಹ ಬೈಕ್ ರೇಸರ್ ಆಗಿರುತ್ತಾರಂತೆ. ಇವರ ಜರ್ನಿಯೇ ಈ ಚಿತ್ರದ ಕಥೆ ಆಗಿದೆ.
ಅಮರ್ ಸಿನಿಮಾದಲ್ಲಿ ವಿಲನ್ ಇಲ್ಲ. ಯಾಕೆಂದರೆ, ಇಲ್ಲಿ 'ಟೈಂ ಇಸ್ ದಿ ವಿಲನ್' ಅಂತ್ತಾರೆ ನಾಗಶೇಖರ್. ಒಬ್ಬ ಹುಡುಗ ಮತ್ತು ಹುಡುಗಿಯ ಜೀವನದಲ್ಲಿ ಸಮಯ ಹೇಗೆ ವಿಲನ್ ಆಗುತ್ತದೆ ಎನ್ನುವುದು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ವಿಶೇಷ ಅಂದರೆ, 90ರ ದಶಕದಲ್ಲಿ ನಡೆದ ಒಬ್ಬ ನಟಿಯ ಜೀವನದ ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆಯಂತೆ.
ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮರ್ ಚಿತ್ರಕ್ಕೆ ನಾಗಶೇಖರ್ ಆಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸತ್ಯಾ ಹೆಗಡೆ ಕ್ಯಾಮರಾ ಹಿಡಿದಿದ್ದಾರೆ. ಅಂಬರೀಷ್ ಮೂಲ ಹೆಸರು ಅಮರ್ ನಾಥ್ ಆಗಿದ್ದು, ಆದ್ದರಿಂದ ಚಿತ್ರಕ್ಕೆ ಅಮರ್ ಎಂಬ ಟೈಟಲ್ ಫಿಕ್ಸ್ ಆಗಿದೆ. ಒಟ್ಟಿನಲ್ಲಿ ಅಂಬಿ ಪುತ್ರ ಅಭಿಷೇಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಯಾವ ಲೆವೆಲ್ ಗೆ ಸದ್ದು ಮಾಡ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ .
YOU MAY ALSO LIKE
.
No comments