ಸ್ಯಾಮ್ಸಂಗ್ ಗ್ಯಾಲಕ್ಷಿ ಎಸ್ 8 ಪ್ಲಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಒಂದು ಉತ್ತಮ ದರ್ಜೆಯ ಫೋನ್ ಆಗಿದ್ದು, ಖಾಸಗಿ ತನಕ್ಕೆ ಹೆಚ್ಚಿನ ಒತ್ತು ನೀಡಿದೆ. ಈ ಪೊನ್ ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್ ರೀಡರ್ ನೊಂದಿಗೆ 8 ಎಂಪಿ ಫ್ರಂಟ್ ಕ್ಯಾಮರಾ ಮತ್ತು 12 ಎಂಪಿ ಹಿಂಬದಿಯ ಕ್ಯಾಮರಾವನ್ನು ಹೊಂದಿದೆ.
Samsung Galaxy S8 Plus |
ಪ್ರದರ್ಶನ :- ಸ್ಕ್ರೀನ್ 6.2 ಇಂಚ (15.75cm) ಹಾಗೂ 1440 x 2960 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್- 5 ನ್ನು ಹೊಂದಿರುವುದರಿಂದ ಬಿದ್ದು ಒಡೆಯುವ ಸಾಧ್ಯತೆ ಕಡಿಮೆಯೇ ಸರಿ. 16M ಕಲರ್ಸ್ ನೊಂದಿಗೆ ಅಮೊಲ್ಡ್ ಕೆಪ್ಯಾಸಿಟಿವ್ ಟಚ್ ಸ್ಕ್ರೀನನ್ನು ಹೊಂದಿದೆ.
ವೇದಿಕೆ (Platform) :- ಆಂಡ್ರಾಯ್ಡ್ 7.0 ನೌಗೋಟ್ ಹಾಗು ಒಕ್ಟ್ರಾ ಕೋರ್ (2.3 GHz, Quad core, M2 Mongoose + 1.7 GHz, Quad core, Cortex A53)ನೊಂದಿಗೆ ಕಾರ್ಯ ನಿರ್ವಹಿಸಲಿದೆ.
ಕೆಮರಾ :- ಹಿಂಬದಿಯ 12 MP ಉತ್ತಮ 4 K ವಿಡಿಯೋ ರೆಕಾರ್ಡಿಂಗ್ ಕೆಮರವನ್ನು LED ಪ್ಲಾಶ್ ನೊಂದಿಗೆ ಮತ್ತು ಮುಂಬದಿಯ 8 MP ಕೆಮರಾ ವನ್ನು ನೀಡಿದ್ದಾರೆ.
ಮೆಮೊರಿ :- ಈ ಫೋನ್ ಎರಡು ವಿಧದಲ್ಲಿ ಅಭ್ಯವಿದ್ದು ಅವು 4 GB RAM ಮತ್ತು 64 GB ಆಂತರಿಕ ಮೆಮೊರಿ , 6 GB RAM ಮತ್ತು 128 GB ಆಂತರಿಕ ಮೆಮೊರಿಯನ್ನು ಹೊಂದಿವೆ. ಹಾಗು ಮೈಕ್ರೋ ಎಸ್ ಡಿ ಯನ್ನು 256 GB ವರೆಗೆ ಹೆಚ್ಚಿಸಬಹುದು.
ದೇಹ (Body) :- 173 ಗ್ರಾಂ ತೂಕವನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್- 5 ನ ಭದ್ರತೆಯನ್ನು ಹೊಂದಿದೆ. 4G Vol TE ಸಪೋರ್ಟ್ ಮಾಡುವ ಎರಡು ನ್ಯಾನೋ ಸಿಮ್ ಸ್ಲಾಟನ್ನು ಹೊಂದಿದೆ. 3500 mAh ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ Li-Ion ಬ್ಯಾಟರಿಯನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಪೊನ್ 8.1 mm ನಷ್ಟು ದಪ್ಪವಾಗಿದೆ. ಈ ಫೋನ್ ಹಲವಾರು ಕಲರ್ ಗಳಲ್ಲಿ ಲಭ್ಯವಿದ್ದು, ಅವೆಂದರೆ Midnight Black, Orchid Gray, Arctic Silver, Coral Blue, Maple Gold, Rose Pink. ಈ ಎಲ್ಲ ಆಯ್ಕೆಗಳನ್ನು ಸ್ಯಾಮ್ಸಂಗ್ ನೀಡಿದ್ದು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.
--------------------------------------------------------------------------------------------------------------------------
5,000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಕೇವಲ 5,555/-ಕ್ಕೆ ..... ಓದಲು ಕ್ಲಿಕ್ ಮಾಡಿ
ಇಂತಹ ಇನ್ನು ವಿವಿಧ ಫೋನ್ ಗಳ ಮಾಹಿತಿಗಾಗಿ ನಮ್ಮ ಸೈಟನ್ನು ಫಾಲೋ ಮಾಡಿ... ಮತ್ತು ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು Subscribe ಮಾಡಿ.....
No comments