Breaking News

ಗೂಗಲಿನಿಂದ ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ

 
     ಇನ್ನು ಮುಂದೆ ಗೂಗಲ್ ನಕಾಶೆಯಲ್ಲಿ ತಮಿಳು ತೆಲಗುಗಳಂತೆ ಕನ್ನಡದ್ಲಲಿಯೂ ಸಹ ಸ್ಥಳಗಳ ಹೆಸರು ನೋಡಲು ಸಿಗುತ್ತದೆ. ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗೂಗಲ್ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. 

ಗೂಗಲ್ ನಕಾಶೆ(ಮ್ಯಾಪ್)ಯಲ್ಲಿ ಇನ್ನು ಮುಂದೆ ಸ್ಥಳಗಳ ಹೆಸರು ಕನ್ನಡದಲ್ಲಿಯೂ ಓದಿ ತಿಳಿಯಲು ಸಾದ್ಯ. ಇಲ್ಲಿಯವರೆಗೆ ಕೇವಲ ಇಂಗ್ಲೀಷನಲ್ಲಿ ಮಾತ್ರ ಇದ್ದ ಹೆಸರುಗಳನ್ನೂ ಇಂಗ್ಲೀಷನ ಜೊತೆಗೆ ಕನ್ನಡದಲ್ಲಿಯೂ ಸಹ ಪ್ರಕಟಿಸುವ ಗೂಗಲ್ ನ  ಕ್ರಮವನ್ನು ಕೆನ್ನಡಿಗರು ಮೆಚ್ಚಿ ಕೊಂಡಾಡಿದ್ದಾರೆ.
   
ಇಷ್ಟು ದಿನ ತಮಿಳು ನಾಡಿನಲ್ಲಿ ತಮಿಳು,ಆಂದ್ರ ಪ್ರದೇಶದ ನಕ್ಷೆಗಳಲ್ಲಿ ತೆಲಗು ಬರುತ್ತಿದ್ದರೂ ಕರ್ನಾಟಕ ಭಾಗದ ನಕ್ಷೆಗಳಲ್ಲಿ ಕನ್ನಡದಲ್ಲಿ ಇರುತ್ತಿರಲಿಲ್ಲ.ಆದರೆ ಇದೀಗ ಗೂಗಲ್ ಸಂಸ್ಥೆ ಕರ್ನಾಟಕದ ಭಾಗವನ್ನು ಕನ್ನಡದಲ್ಲಿ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದೆ. ಇದೀಗ ಕೆಲವು ಸ್ಥಳಗಳ ಹೆಸರುಗಳಲ್ಲಿ ದೋಷಗಳು ಕಂಡುಬಂದರೂ ಕ್ರಮೇಣ ಎಲ್ಲ ತಪ್ಪುಗಳು ಸರಿಯಾಗುವ ನಿರೀಕ್ಷೆ ಕನ್ನಡ ಪ್ರಿಯರದ್ದು. ಅದೇನೇ ಇದ್ದರು ನಕ್ಷೆಯಲ್ಲಿ ನಮ್ಮ ಊರಿನ ಹೆಸರು ನಮ್ಮ ಮಾತೃಭಾಷೆಯಲ್ಲಿ ಕಾಣುವಂತಾಗಿದ್ದು ರಾಜ್ಯೋತ್ಸವದ ಸಂದರ್ಭದಲ್ಲಿ ಗೂಗಲ್ ನಿಂದ ನಮ್ಮ ನಾಡಿಗೆ ಸಿಕ್ಕ ಒಂದು ಕೊಡುಗೆ ಎನ್ನಬಹುದು. 

ಗೂಗಲ್ ಸಂಸ್ಥೆಯ ಈ ತಿರ್ಮಾನವನ್ನು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 


No comments